ADVERTISEMENT

ಐರಾ ಸೇವೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 13:03 IST
Last Updated 14 ಮಾರ್ಚ್ 2020, 13:03 IST

ಪ್ರತಿನಿತ್ಯದ ಕೆಲಸಗಳನ್ನು ಮಾಡುವುದು ಕಣ್ಣು ಇರುವವರಿಗೆ ಸುಲಭದ ಕೆಲಸ. ಆದರೆ, ಅದು ದೃಷ್ಟಿ ಇಲ್ಲದವರಿಗೆ ಕಷ್ಟದ ಸಂಗತಿ. ಅದರಲ್ಲೂ, ಅವರು ಹೊರಗಡೆ ಇದ್ದಾಗ ಅಥವಾ ಅಪರಿಚಿತ ಸ್ಥಳದಲ್ಲಿ ಇದ್ದಾಗ ಮತ್ತೂ ಕಷ್ಟ.

‘ಐರಾ’ ಕೆಲಸ ಮಾಡುವುದು ಕಣ್ಣು ಇಲ್ಲದವರಿಗೆ, ಕಣ್ಣು ಇರುವವರ ನೆರವು ಒದಗಿಸುವ ತತ್ವದ ಅಡಿ. ಇದು ಚಂದಾ ಆಧಾರಿತ ಸೇವೆ. ಈ ಸೇವೆಯನ್ನು ಪಡೆಯುವ ವ್ಯಕ್ತಿಗೆ ಒಬ್ಬ ಏಜೆಂಟ್‌ನ ನೆರವು ನೀಡಲಾಗುತ್ತದೆ. ಈ ಏಜೆಂಟ್‌ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸೇವೆಗೆ ಲಭ್ಯವಿರುತ್ತಾನೆ.

ಕಣ್ಣು ಇಲ್ಲದ ವ್ಯಕ್ತಿ ಇರುವ ಸ್ಥಳದ ಬಗ್ಗೆ ಲೈವ್‌ ಸ್ಟ್ರೀಮಿಂಗ್‌ ಮೂಲಕ ತಿಳಿದುಕೊಳ್ಳುತ್ತ ಇರುತ್ತಾನೆ ಈ ಏಜೆಂಟ್‌. ಕಣ್ಣು ಇಲ್ಲದವ ಅಲ್ಲಿ ತನ್ನ ಕೆಲಸಗಳನ್ನು ಪೂರೈಸಿಕೊಳ್ಳಲು ಬೇಕಿರುವ ನೆರವು ನೀಡುತ್ತಿರುತ್ತಾನೆ.

ADVERTISEMENT

ಸೇವೆಯನ್ನು ಪಡೆದುಕೊಂಡ ವ್ಯಕ್ತಿ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತ, ಆ ಸ್ಥಳದಲ್ಲಿ ಇರುವ ವಸ್ತುಗಳ ಬಗ್ಗೆ ಮಾಹಿತಿ ನೀಡುತ್ತ ಸೇವೆ ಒದಗಿಸುತ್ತ ಇರುತ್ತಾನೆ.

ಈ ‘ಐರಾ’ ಸೇವೆಯು ಒಂದು ಮೊಬೈಲ್‌ ಆ್ಯಪ್‌, ಚೂಟಿ ಕನ್ನಡಕ, ಸ್ಮಾರ್ಟ್‌ಫೋನ್‌ ಮೂಲಕ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.