ADVERTISEMENT

Word ಫೈಲ್‌ನ್ನು ಪಿಡಿಎಫ್‌ಗೆ ಬದಲಾಯಿಸಿ

ರಶ್ಮಿ ಕಾಸರಗೋಡು
Published 12 ಸೆಪ್ಟೆಂಬರ್ 2019, 10:14 IST
Last Updated 12 ಸೆಪ್ಟೆಂಬರ್ 2019, 10:14 IST

ಲೇಖನ ಅಥವಾ ಇನ್ಯಾವುದೇ ಬರಹಗಳನ್ನು ಕಳಿಸುವಾಗ ಪಿಡಿಎಫ್ ಫಾರ್ಮೇಟ್‌ನಲ್ಲಿ ಕಳಿಸಿ ಎಂದು ಹೇಳುತ್ತಾರೆ. ನಾವು ಟೈಪಿಸಿದ ವರ್ಡ್ ಫೈಲ್‌ ಪಿಡಿಎಫ್ ಫೈಲ್ ಆಗಿ ಬದಲಾಯಿಸಲು ಹೆಚ್ಚಿನ ಶ್ರಮ ಏನೂ ಬೇಡ. ಅದಕ್ಕಾಗಿ ಕೆಲವು ಸುಲಭ ಉಪಾಯಗಳು ಇಲ್ಲಿವೆ.

ಗೂಗಲ್ ಡ್ರೈವ್ ಬಳಸಿ

ಗೂಗಲ್ ಖಾತೆಗೆ ಸೈನ್ ಇನ್ ಆಗುವ ಮೂಲಕ ಗೂಗಲ್ ಡ್ರೈವ್‌ಗೆ ಹೋಗಿ . ಅಲ್ಲಿ Docs ಕ್ಲಿಕ್ ಮಾಡಿದ ಕೂಡಲೇ Blank ಎಂದು ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡುವ ಮೂಲಕ ಹೊಸ ಫೈಲ್ ಅಪ್‌ಲೋಡ್ ಮಾಡಿ ನೀವು ಅಪ್‌ಲೋಡ್ ಮಾಡಿರುವ ಫೈಲ್ ಓಪನ್ ಮಾಡಿ. ಮೆನುವಿನಲ್ಲಿ ಫೈಲ್ ಆಪ್ಶನ್ ಕೆಳಗಡೆ ಡೌನ್‌ಲೋಡ್ ಎಂಬ ಆಪ್ಶನ್ ಕಾಣಿಸುತ್ತದೆ. ಡೌನ್‌ಲೋಡ್‌ ಆಪ್ಶನ್ ಮೇಲೆ ಕರ್ಜರ್ ಇಟ್ಟರೆ PDF document ಎಂಬ ಆಪ್ಶನ್ ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಫೈಲ್ ಪಿಡಿಎಫ್‌ಗೆ ಬದಲಾಗುತ್ತದೆ. ಕನ್ವರ್ಟ್ ಆಗಿರುವ ಫೈಲ್‌ ನೀವು ಬಯಸಿದ ಫೋಲ್ಡರ್‌ನಲ್ಲಿ ಸೇವ್ ಮಾಡಿಕೊಳ್ಳಿ.

ADVERTISEMENT

ಆನ್‌ಲೈನ್‌ ಪಿಡಿಎಫ್ ಕನ್ವರ್ಟರ್‌ಗಳು

ಗೂಗಲ್ ಡ್ರೈವ್‌ನಲ್ಲಿ ಫೈಲ್ ಸೇವ್ ಮಾಡಿ ಅದನ್ನು ಪಿಡಿಎಫ್ ಫೈಲ್ ಆಗಿ ಬದಲಾಯಿಸುವುದು ಒಂದು ವಿಧಾನ. ಆದರೆ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿಯೂ ಫೈಲ್ ಅಪ್‌ಲೋಡ್ ಮಾಡಿ ಪಿಡಿಎಫ್ ಕನ್ವರ್ಟ್ ಮಾಡಬಹುದಾಗಿದೆ.

PDFtoWord.com

ಈ https://www.wordtopdf.com/ ಲಿಂಕ್ ಕ್ಲಿಕ್ ಮಾಡಿ. ನಿಮ್ಮಲ್ಲಿರುವ ವರ್ಡ್ ಫೈಲ್‌ ಪಿಡಿಎಫ್ ಫೈಲ್ ಆಗಿ ಬದಲಾಯಿಸಲು Word toPDF ಕ್ಲಿಕ್ ಮಾಡಿ.
ನಿಮ್ಮ ಫೈಲ್ ಆಯ್ಕೆ ಮಾಡಿ ಅಪ್‌ಲೋಡ್ ಮಾಡಿ.
ಬದಲಾಯಿಸಿದ ಫೈಲ್‌ಗಳನ್ನು ಇಮೇಲ್ ಮೂಲಕ ಪಡೆಯಲು ನಿಮ್ಮ ಇಮೇಲ್ ಐಡಿ ನಮೂದಿಸಿ.
ಮುಂದಿನ ಹಂತ- Convert Now ಕ್ಲಿಕ್ ಮಾಡಿ.

ಈ ವೆಬ್‌ಸೈಟ್‌ನಲ್ಲಿ ವರ್ಡ್ ಫೈಲ್ ಮಾತ್ರವಲ್ಲ ಎಕ್ಲೆಲ್, ಪವರ್ ಪಾಯಿಂಟ್ ಫೈಲ್‌ಗಳನ್ನೂ ನಿಮಗೆ ಬೇಕಾದ ಫಾರ್ಮೆಟ್‌ಗೆ ಬದಲಿಸಿಕೊಳ್ಳಬಹುದು.

ಅದೇ ವೇಳೆ ಪಿಡಿಎಫ್ ಫೈಲ್‌ merge ಮಾಡಲು, Split, Compress ಮಾಡಲು ಮತ್ತು ಇನ್ನಿತರ ಚಟುವಟಿಕೆಗಳಿಗೆ https://www.ilovepdf.com/ ಲಿಂಕ್ ಮಾಡಿ. ಈ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಆಪ್ಶನ್‌ಗಿರುವುದರಿಂದ ಬಳಕೆಯೂ ಸುಲಭ.

ರಶ್ಮಿ. ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.