ADVERTISEMENT

ಡಾಕ್ಟರ್ಸ್, ನರ್ಸ್, ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆ ಥ್ಯಾಂಕ್ಯೂ ಎಂದ ಗೂಗಲ್‌

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2020, 9:26 IST
Last Updated 13 ಏಪ್ರಿಲ್ 2020, 9:26 IST
   

ಬೆಂಗಳೂರು: ಪ್ರಾಣದ ಹಂಗು ತೊರೆದು ಕೋವಿಡ್‌–19 ವಿರುದ್ಧದ ಹೋರಾಟದಲ್ಲಿರುವ ವೈದ್ಯರು, ನರ್ಸ್‌ಗಳು ಹಾಗೂ ಮೆಡಿಕಲ್‌ ಸಿಬ್ಬಂದಿಗಳಿಗೆ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.

ಜಾಗತಿಕವಾಗಿ ಕೊರೊನಾ ವೈರಸ್‌ ಸೋಂಕಿತರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ವೈದ್ಯರು, ನರ್ಸ್‌ಗಳು ಹಾಗೂ ಪ್ಯಾರಾ ಮೆಡಿಕಲ್‌ ಸಿಬ್ಬಂದಿಗೆಗೂಗಲ್ ಸಂಸ್ಥೆ ಆನಿಮೇಟೆಡ್‌ ಡೂಡಲ್‌ನಲ್ಲಿ ಹೃದಯದ ಎಮೋಜಿ ಮೂಲಕ ಧನ್ಯವಾದಗಳನ್ನು ಅರ್ಪಿಸಿದೆ.

ಕೊವೀಡ್‌–19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆಗಳನ್ನುಅರ್ಪಿಸುವ ಡೂಡಲ್‌ ಸರಣಿಯನ್ನು ಪ್ರಾರಂಭಿಸಲಾಗಿದೆ ಎಂದು ಗೂಗಲ್‌ ಸಂಸ್ಥೆ ತಿಳಿಸಿದೆ.

ADVERTISEMENT

ಡೂಡಲ್‌ ಮೇಲೆ ಮೌಸ್‌ ಪಾಯಿಂಟ್‌ ಇಟ್ಟರೆ, ಥ್ಯಾಂಕ್ಯೂ ಎಂಬ ಸಂದೇಶ ಕಾಣುತ್ತದೆ. ಅದರಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ಎಲ್ಲ ಆರೋಗ್ಯ ಸಿಬ್ಬಂದಿಗೆ ಥ್ಯಾಂಕ್ಯೂ ಎಂಬ ಮೆಸೇಜ್‌ ಗೋಚರಿಸುತ್ತದೆ

ಈ ಡೂಡಲ್‌ ಸರಣಿಯಲ್ಲಿ ರೈತರು ಮತ್ತು ಮನೆ ಮನೆಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಡೆಲಿವರಿ ಬಾಯ್‌ಗಳಿಗೆ ಗೌರವ ಸಲ್ಲಿಸುವುದಾಗಿ ಗೂಗಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.