ADVERTISEMENT

ಬ್ಯಾಟರಿ ಚಾಲಿತ ‘ಟ್ರೆಂಡ್‌ ಇ’

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 19:48 IST
Last Updated 11 ಮಾರ್ಚ್ 2019, 19:48 IST
trend-e
trend-e   

‘ಅವಾನ್‌ ಮೋಟಾರ್ಸ್‌ ಇಂಡಿಯಾ’ ಹೊಸ ಸ್ಮಾರ್ಟ್‌ ಎಲೆಕ್ಟ್ರಿಕ್ ಸ್ಕೂಟರ್ ‘ಟ್ರೆಂಡ್ ಇ’ ಅನ್ನು ಬೆಂಗಳೂರಿನ ಅಟೊಮೊಬೈಲ್ ಎಕ್ಸ್‌ಪೊ– 2019ರಲ್ಲಿ ಅನಾವರಣಗೊಳಿಸಿದೆ.

ಅಧಿಕ ಕಾರ್ಯಕ್ಷಮತೆಯ ಹೊಂದಿರುವ ಇದು ಲೀಥಿಯಮ್ ಅಯಾನ್ ಬ್ಯಾಟರಿ ಹೊಂದಿದೆ. ಗಂಟೆಗೆ 45 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇದಕ್ಕಿದೆ. ಒಂದು ಬ್ಯಾಟರಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ 60 ಕಿ.ಮೀವರೆಗೂ ಚಲಿಸುತ್ತದೆ ಮತ್ತು ಎರಡು ಬ್ಯಾಟರಿಯಲ್ಲಿ 110 ಕಿ.ಮೀವರೆಗೂ ಚಲಿಸುತ್ತದೆ. ಈ ಸ್ಕೂಟರ್‌ನ ಲೀಥಿಯಮ್‌ ‘ಅಯಾನ್‌’ ಬ್ಯಾಟರಿಯ ಚಾರ್ಜ್‌ ಸಮಯವು 2ರಿಂದ 4 ಗಂಟೆಗಳಾಗಿವೆ.

ಹೈಡ್ರಾಲಿಕ್ ಟೆಲಿಸ್ಕೋಪಿಕ್ ಫ್ರಂಟ್‌ ಸಸ್ಪೆನ್ಷನ್‌ ಮತ್ತು ಕಾಯಿಲ್‌ ಸ್ಪ್ರಿಂಗ್ ಹಿಂಬದಿ ಸಸ್ಪೆನ್ಷನ್‌ ಅನ್ನು ಹೊಂದಿದೆ. ಇದರ ಜೊತೆಗೆ, ಅಲಾಯ್ಡ್‌ ವೀಲ್‌ಗಳು, ಡಿಸ್ಕ್‌ ಮತ್ತು ಡ್ರಮ್‌ ಬ್ರೇಕ್‌ಗಳನ್ನು ಮುಂದೆ ಮತ್ತು ಹಿಂಬದಿ ಚಕ್ರಗಳಿಗೆ ಅಳವಡಿಸಲಾಗಿದೆ. ಈ ಸ್ಕೂಟರ್ ಗರಿಷ್ಠ 159 ಕೆ.ಜಿಯಷ್ಟು ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಸುಂದರವಾದ ವಿನ್ಯಾಸ, ಅತ್ಯುತ್ತಮ ಎಂಜಿನಿಯರಿಂಗ್‌ ಮತ್ತು ಅತ್ಯಾಧುನಿಕ ಸಲಕರಣೆಯೊಂದಿಗೆ ‘ಟ್ರೆಂಡ್ ಇ’ ಮುಂದಿನ ತಲೆಮಾರಿನ ಇ-ಸ್ಕೂಟರ್ ಆಗಿದೆ.

ADVERTISEMENT

ಈ ಸಂದರ್ಭದಲ್ಲಿ ಮಾತನಾಡಿದ ಅವಾನ್‌ ಮೋಟಾರ್ಸ್‌ ವಹಿವಾಟು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಪಂಕಜ್ ತಿವಾರಿ, ಇತ್ತೀಚಿನ ಕ್ಸೆರೋ ಸರಣಿಯ ‘ಟ್ರೆಂಡ್ ಇ’ ಸ್ಕೂಟರ್‌ನಿಂದಾಗಿ ಆಧುನಿಕ ಗ್ರಾಹಕರ ಅಗತ್ಯವನ್ನು ಪೂರೈಸಲು ಶಕ್ತಿಯುತವಾದ ತಂತ್ರಜ್ಞಾನ ಮತ್ತು ವಿನ್ಯಾಸದ ಮಿಶ್ರಣವನ್ನು ರಚಿಸಲು ಅವಾನ್ ಮೋಟಾರ್ಸ್‌ಗೆ ಸಾಧ್ಯವಾಗಿದೆ. ‘ಟ್ರೆಂಡ್ ಇ’ನ ಪ್ರತಿ ವೈಶಿಷ್ಟ್ಯವೂ ರೈಡರ್‌ಗಳ ಅಗತ್ಯ ಮತ್ತು ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಅಧಿಕ ಗ್ರೌಂಡ್ ಕ್ಲಿಯರೆನ್ಸ್‌, ಲೀಥಿಯಂ ಅಯಾನ್ ಡಿಟ್ಯಾಚಬಲ್‌ ಬ್ಯಾಟರಿ ಬ್ಯಾಕ್‌ ಮತ್ತು ಆಕರ್ಷಕ ಲುಕ್‌ಗಳು ಈ ಶ್ರೇಣಿಯಲ್ಲಿ ಉತ್ತಮ ಸ್ಕೂಟರ್ ಎಂಬ ಹೆಗ್ಗಳಿಕೆ ನೀಡಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.