ADVERTISEMENT

ಗೂಗಲ್ ಹಿಂಬಾಲಿಸುತ್ತಿದೆಯೇ? ಸೆಟ್ಟಿಂಗ್ಸ್ ಬದಲಿಸಿ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:31 IST
Last Updated 14 ನವೆಂಬರ್ 2018, 19:31 IST

ಗೂಗಲ್ ನಿಮ್ಮ ಸುತ್ತಾಟಗಳ ಬಗ್ಗೆ ಎಲ್ಲ ವಿವರಗಳನ್ನು ಸೇವ್ ಮಾಡುತ್ತಲೇ ಇರುತ್ತದೆ. ನೀವು ಭೇಟಿ ನೀಡಿದ ಸ್ಥಳಗಳು, ಗೂಗಲ್ ನಲ್ಲಿ ನೀವು ಸರ್ಚ್ ಮಾಡಿದ ಸ್ಥಳಗಳು ಎಲ್ಲವನ್ನೂ ಗೂಗಲ್ ನೆನಪಿಟ್ಟುಕೊಂಡಿರುತ್ತದೆ. ಈ ರೀತಿಯ ಟ್ರ್ಯಾಕಿಂಗ್ ಬೇಡ ಎಂದಾದರೆ ನೀವು ನಿಮ್ಮ ಗೂಗಲ್ ಸೆಟ್ಟಿಂಗ್ ಬದಲಿಸಬೇಕು.

ಹೀಗೆ ಮಾಡಿ:ವೆಬ್ ಬ್ರೌಸರ್‌ನಲ್ಲಿ ಗೂಗಲ್ ಖಾತೆಗೆ ಲಾಗಿನ್ ಆದ ನಂತರ ಬ್ರೌಸರ್‌ನಲ್ಲಿ myactivity.google.com ಓಪನ್ ಮಾಡಿ ಅಲ್ಲಿ Activity control ಕ್ಲಿಕ್ ಮಾಡಿ

Web &App Activity ಮತ್ತು Location History ಎಂಬ ಸೆಟ್ಟಿಂಗ್ಸ್ ಟರ್ನ್ ಆಫ್ ಮಾಡಿ.

ADVERTISEMENT

ಈ ಸೆಟ್ಟಿಂಗ್ಸ್ ಆಫ್ ಮಾಡಿದರೆ ಗೂಗಲ್‌ನ ಕೆಲವು ಸೇವೆಗಳು ಕಾರ್ಯನಿರ್ವಹಿಸುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶ ಇಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಗೂಗಲ್‌ನಲ್ಲಿ ಹೇಳಿರುವ ಆ ಸೇವೆಗಳು ಅಷ್ಟೊಂದು ಪ್ರಾಮುಖ್ಯ ಅಲ್ಲದೇ ಇರುವ ಕಾರಣ Location History ಟರ್ನ್ ಆಫ್ ಮಾಡಿದರೆ ಸಮಸ್ಯೆ ಆಗಲ್ಲ.

ಅಂಡ್ರಾಯ್ಡ್‌ನಲ್ಲಿ:ಮೊಬೈಲ್ ಸೆಟ್ಟಿಂಗ್ಸ್ ಓಪನ್ ಮಾಡಿ.

Privacy and Safety ಕ್ಲಿಕ್ ಮಾಡಿ‌

ಅಲ್ಲಿ ಲೊಕೇಶನ್ ಆಫ್ ಮಾಡಿ.

ಅದರ ಕೆಳಗೆಯೇ App Permission ಅಂತ ಇರುತ್ತದೆ. ನೀವು ನಿಮ್ಮ ಲೊಕೇಶನ್ access ಮಾಡಲು ಯಾವೆಲ್ಲ App ಗಳಿಗೆ ಅನುಮತಿ ನೀಡಿದ್ದೀರಿ ಎಂಬುದು ಇಲ್ಲಿರುತ್ತದೆ. ಯಾವುದೇ app ಇನ್ ಸ್ಟಾಲ್ ಮಾಡಿದರೆ ನಿಮ್ಮ location access ಮಾಡಲು ಅನುಮತಿ ಕೋರುತ್ತದೆ. ಇದಕ್ಕೆ allow ಎಂದು ಒತ್ತಿದ ಕೂಡಲೇ ಆ app ಗಳು ನಿಮ್ಮ ಲೊಕೇಶನನ್ನು access ಮಾಡುತ್ತದೆ.

ಹಿಂದಿನ ಭೇಟಿ ವಿವರ ಡಿಲೀಟ್ ಮಾಡಿ: Myactivity.google.com ಪೇಜ್ ಗೆ ಭೇಟಿ ನೀಡಿ. ಅಲ್ಲಿ location History ಕೆಳಗೆ Manage Location ಕ್ಲಿಕ್ ಮಾಡಿ. ಅಲ್ಲಿ Today ಎಂದ ಕಾಣಿಸುತ್ತದೆ. ನೀವು ಆ ದಿನ ಭೇಟಿ ಕೊಟ್ಟ ಮಾಹಿತಿಗಳು ಇಲ್ಲಿ ಡಿಸ್ ಪ್ಲೇ ಆಗುತ್ತದೆ. ಬಲಭಾಗದಲ್ಲಿರುವ ಮೆನು ಕ್ಲಿಕ್ ಮಾಡಿದರೆ ಸೆಟ್ಟಿಂಗ್ಸ್ ಓಪನ್ ಆಗುತ್ತದೆ. ಅಲ್ಲಿ ಸ್ಕ್ರಾಲ್ ಮಾಡಿ ಕೆಳಗೆ ಬಂದರೆ Delete all Location History ಎಂಬ ಆಪ್ಶನ್ ಕಾಣುತ್ತದೆ. ನಿಮ್ಮ ಜಿಮೇಲ್ ಲಾಗಿನ್ ಖಾತೆಯೊಂದಿಗೆ ಲಿಂಕ್ ಹೊಂದಿರುವ ಎಲ್ಲ location History ಅನ್ನು ಇದು ಡಿಲೀಟ್ ಮಾಡುತ್ತದೆ.

– ರಶ್ಮಿ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.