ADVERTISEMENT

‘ಎಸ್‌ಎಂಬಿ’ಗಾಗಿ ಎಚ್‌ಪಿಯಿಂದ ಹೊಸ ನೋಟ್‌ಬುಕ್

ವಿಶ್ವನಾಥ ಎಸ್.
Published 5 ಜನವರಿ 2021, 19:30 IST
Last Updated 5 ಜನವರಿ 2021, 19:30 IST
ಪ್ರೊಬುಕ್‌ 635 ಏರೊ
ಪ್ರೊಬುಕ್‌ 635 ಏರೊ   

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು (ಎಸ್‌ಎಂಬಿ) ಮತ್ತು ಮೊಬೈಲ್‌ ವೃತ್ತಿಪರರಿಗೆ ನಿತ್ಯದ ವಹಿವಾಟನ್ನು ಸುಲಭಗೊಳಿಸುವ ಉದ್ದೇಶದಿಂದ ಎಚ್‌ಪಿ ಕಂಪನಿಯು ಪ್ರೊಬುಕ್‌ ಶ್ರೇಣಿಯಲ್ಲಿ ಹೊಸ ನೋಟ್‌ಬುಕ್‌ ಬಿಡುಗಡೆ ಮಾಡಿದೆ. ಎಚ್‌ಪಿ ಪ್ರೊಬುಕ್‌ 635 ಏರೊ ಜಿ 7 ನೋಟ್‌ಬುಕ್‌ ಹಗುರವಿದ್ದು, ತೂಕ 1 ಕೆ.ಜಿಗಿಂತಲೂ ಕಡಿಮೆ ಇದೆ. ಆರಂಭಿಕ ಬೆಲೆ ₹74,999 ಇದೆ.

ಎಎಂಡಿ ರೇಜನ್‌ 4000 ಸಿರೀಸ್‌ ಮೊಬೈಲ್‌ ಪ್ರೊಸೆಸರ್‌, ವಿಂಡೋಸ್‌ 10 ಪ್ರೊ 64 ಅನ್ನು ಈ ನೋಟ್‌ಬುಕ್‌ಗಳು ಒಳಗೊಂಡಿವೆ. 13.3 ಇಂಚು ಎಫ್‌ಎಚ್‌ಡಿ ಡಿಸ್‌ಪ್ಲೇ, ಸ್ಕ್ರೀನ್‌ ಟು ಬಾಡಿ ರೇಶಿಯೊ ಶೇ 86.2ರಷ್ಟಿದ್ದು, 9.5 ಎಂಎಂ ಟಾಪ್‌ ಬೀಜಲ್‌ ಮತ್ತು 4.28 ಎಂಎಂ ಸೈಡ್‌ ಬೀಜಲ್‌ ಇದೆ. ಬ್ಯಾಟರಿ ದೀರ್ಘ ಬಾಳಿಕೆ, ಉತ್ತಮ ಸಂಪರ್ಕ ಮತ್ತು ಸುರಕ್ಷತೆಯಿಂದ ಕೂಡಿದ್ದು, ದಿನಪೂರ್ತಿ ಬಳಕೆಗೆ ಲಭ್ಯವಾಗಲಿದೆ. 30 ನಿಮಿಷಗಳಲ್ಲಿ ಶೇ 50ರಷ್ಟು ಬ್ಯಾಟರಿ ಚಾರ್ಜ್‌ ಆಗುತ್ತದೆ. ಸ್ಟೋರೇಜ್‌ ಸಾಮರ್ಥ್ಯವನ್ನು 1ಟಿಬಿಗೆ ಹೆಚ್ಚಿಸಿಕೊಳ್ಳುವ ಅವಕಾಶವಿದೆ. ವೈ–ಫೈ 6 ಮತ್ತು ಕ್ಯಾಟ್‌ 9 4ಜಿಎಲ್‌ಟಿಇ ವೈರ್‌ಲೆಸ್‌ ಬ್ರಾಡ್‌ಬ್ಯಾಂಡ್‌ ಆಯ್ಕೆಗಳು ಇರುವುದರಿಂದ ಅಂತರ್ಜಾಲದ ಸಂಪರ್ಕವು ಸುಲಭವಾಗಲಿದೆ.

ಯುಎಸ್‌ಬಿ 3.1 ಜೆನ್‌2, ಯುಎಸ್‌ಬಿ 3.1 ಜೆನ್‌ 1, ಎಚ್ಡಿಎಂಐ 2.0, ಹೆಡ್‌ಫೋನ್‌ ಮತ್ತು ನಾನೊ ಸೆಕ್ಯುರಿಟಿ ಲಾಕ್‌ ಸ್ಲಾಟ್‌ ಇರುವುದರಿಂದ ಮೊಬೈಲ್‌ ವೃತ್ತಿಪರರಿಗೆ ಅನುಕೂಲವಾಗಲಿದೆ.

ADVERTISEMENT

ಎಚ್‌ಪಿ ಕ್ವಿಕ್‌ಡ್ರಾಪ್‌
ಡಾಕ್ಯುಮೆಂಟ್‌, ಫೊಟೊ, ವಿಡಿಯೊ ಇತ್ಯಾದಿಗಳನ್ನು ಒಂದು ಸಾಧನದಿಂದ ಇನ್ನೊಂದಕ್ಕೆ ವಯರ್ ಸಂಪರ್ಕವಿಲ್ಲದೇ ಕಳುಹಿಸಲು ಅನುಕೂಲ.

ಎಸ್‌ಎಂಬಿಗಳು ಕೋವಿಡ್‌–19 ಸಾಂಕ್ರಾಮಿಕದ ಪರಿಣಾಮಗಳಿಂದ ಹೊರಬರಲು ಡಿಜಿಟಲ್‌ ತಂತ್ರಜ್ಞಾನದ ಬಳಕೆ ಆರಂಭಿಸಿವೆ ಎನ್ನುವುದನ್ನು ಎಚ್‌ಪಿ ಏಷ್ಯಾ ಎಸ್‌ಎಂಬಿ ವರದಿಯಲ್ಲಿ ತಿಳಿಸಿದೆ. ಈ ನಿಟ್ಟಿನಲ್ಲಿ ಎಂಎಂಬಿಗಳು, ಉದ್ಯಮಗಳು ಹಾಗೂ ಮೊಬೈಲ್‌ ವೃತ್ತಿಪರರ ನಿರ್ದಿಷ್ಟ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ನೋಟ್‌ಬುಕ್‌ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದೆ.

‘ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಎಸ್‌ಎಂಬಿಗಳ ಪಾತ್ರ ಬಹಳ ಮುಖ್ಯ. ಮನೆಯಿಂದ ಕೆಲಸ ಮಾಡುವ ಪ್ರವೃತ್ತಿ ಆರಂಭವಾಗಿರುವುದರಿಂದ ಮಲ್ಟಿಟಾಸ್ಕ್‌, ಮಲ್ಟಿ ಪ್ಲೇಸ್‌ ಬೇಡಿಕೆಗಳನ್ನು ಈಡೇರಿಸುವಲ್ಲಿ ಈ ನೋಟ್‌ಬುಕ್‌ ಉಪಯುಕ್ತ’ ಎನ್ನುತ್ತಾರೆ ಎಚ್‌ಪಿ ಇಂಡಿಯಾದ ಮಾರುಕಟ್ಟೆಯ ಹಿರಿಯ ನಿರ್ದೇಶಕ ವಿಕ್ರಂ ಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.