ADVERTISEMENT

ಪರಿಷ್ಕೃತ 'ಎಂಆಧಾರ್‌ ಆ್ಯಪ್‌' ಬಿಡುಗಡೆ; ಅಪ್‌ಡೇಟ್‌ ಮಾಡಿಕೊಳ್ಳಿ ಮೊಬೈಲ್‌ ಆಧಾರ್

ಏಜೆನ್ಸೀಸ್
Published 28 ನವೆಂಬರ್ 2019, 12:08 IST
Last Updated 28 ನವೆಂಬರ್ 2019, 12:08 IST
ಎಂಆಧಾರ್‌ ಆ್ಯಪ್‌
ಎಂಆಧಾರ್‌ ಆ್ಯಪ್‌    

ಬೆಂಗಳೂರು: ನಿತ್ಯದ ಬಹುತೇಕ ವ್ಯವಹಾರಗಳಲ್ಲಿ ಆಧಾರ್‌ ಕಾರ್ಡ್‌ ಅವಶ್ಯಕತೆ ಎದುರಾಗುತ್ತದೆ. ಅಗತ್ಯವಿದ್ದಾಗ ಮೊಬೈಲ್‌ನಲ್ಲೇ ತೆಗೆದು ತೋರಿಸಲು ಅನುವಾಗುವ ನಿಟ್ಟಿನಲ್ಲಿ ಈ ಹಿಂದೆಯೇ ಎಂಆಧಾರ್‌ ಅಪ್ಲಿಕೇಷನ್‌ ಬಿಡುಗಡೆ ಮಾಡಲಾಗಿದ್ದು, ಹೊಸ ಆಯ್ಕೆಗಳನ್ನು ಒಳಗೊಂಡಿರುವ ಪರಿಷ್ಕೃತ 'ಎಂಆಧಾರ್‌' ಆ್ಯಪ್‌ ಈಗ ಡೌನ್‌ಲೋಡ್‌ಗೆ ಲಭ್ಯವಿದೆ.

ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ(ಯುಐಡಿಎಐ) ಬಿಡುಗಡೆ ಮಾಡಿರುವ ಹೊಸ ಆವೃತಿಯ ಎಂಆಧಾರ್‌ ಆ್ಯಪ್‌ ಐಒಎಸ್‌ ಮತ್ತು ಆ್ಯಂಡ್ರಾಯ್ಡ್‌ ಎರಡರಲ್ಲೂ ಲಭ್ಯವಿದೆ. ಆ್ಯಂಡ್ರಾಯ್ಡ್‌ 5.0 ಮತ್ತು ನಂತರದ ಆವೃತ್ತಿಯ ಒಎಸ್‌ ಹಾಗೂ ಐಒಎಸ್‌ನ 10.0 ಅಥವಾ ನಂತರದ ಆವೃತ್ತಿಯ ಒಎಸ್‌ ಹೊಂದಿರುವ ಮೊಬೈಲ್‌ನಲ್ಲಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು.

ಎಂಆಧಾರ್‌ ಆ್ಯಪ್‌ ಐಫೋನ್‌ ಮತ್ತುಐಪ್ಯಾಡ್‌ಗೂ ಹೊಂದಿಕೆಯಾಗುತ್ತಿದೆ. ಹೊಸ ಆವೃತ್ತಿಯ ಆ್ಯಪ್‌ ಇನ್‌ಸ್ಟಾಲ್‌ ಮಾಡುವ ಮುನ್ನ ಹಳೆಯ ಎಂಆಧಾರ್‌ ಅಪ್ಲಿಕೇಷನ್‌ ಡಿಲೀಟ್‌ ಮಾಡಿಇಲ್ಲವೇ ಅಪ್‌ಡೇಟ್‌ ಮಾಡಿಕೊಳ್ಳಿ.ಡಿಜಿಟಲ್‌ ರೂಪದಲ್ಲಿ ಆಧಾರ್‌ ಕಾರ್ಡ್‌ ಈ ಆ್ಯಪ್‌ನಲ್ಲಿ ಸಿಗಲಿದೆ.

ADVERTISEMENT

*ಎಂಆಧಾರ್‌ ಆ್ಯಪ್‌ನಲ್ಲಿ ಇಂಗ್ಲಿಷ್, ಕನ್ನಡ, ಹಿಂದಿ, ಉರ್ದು, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಆಯ್ಕೆಗಳನ್ನು ಪಡೆಯಬಹುದು. ಆದರೆ, ಯಾವುದೇ ಮಾಹಿತಿ ಹುಡುಕುವಾಗ ಅಥವಾ ಸೇರಿಸುವ ಕ್ರಮದಲ್ಲಿ ಇಂಗ್ಲಿಷ್‌ ಅಕ್ಷರಗಳನ್ನು ಮಾತ್ರ ಸ್ವೀಕರಿಸುತ್ತದೆ.

* ಇನ್‌ಸ್ಟಾಲ್‌ ಆದ ಬಳಿಕ ಎಲ್ಲ ಸೇವೆಗಳನ್ನು ಪಡೆಯಲುಆ್ಯಪ್‌ನಲ್ಲಿ ಆಧಾರ್ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಬೇಕು. ಮೇನ್‌ ಸರ್ವಿಸ್‌ ಡ್ಯಾಶ್‌ಬೋರ್ಡ್‌, ರಿಕ್ವೆಸ್ಟ್‌ ಸ್ಟೇಟಸ್‌ ಸರ್ವೀಸಸ್‌, ಮೈ ಆಧಾರ್‌ ಸೇವೆಗಳು ಆ್ಯಪ್‌ನಲ್ಲಿ ಲಭ್ಯವಿದೆ.

* ವಿಳಾಸ ಅಪ್‌ಡೇಟ್‌ ಮಾಡುವುದು, ಇಕೆವೈಸಿ ಡೌನ್‌ಲೋಡ್‌, ಆಧಾರ್‌ ಕಾರ್ಡ್ ಡೌನ್‌ಲೋಡ್‌, ಕ್ಯುಆರ್‌ ಕೋಡ್‌ ಸ್ಕ್ಯಾನ್‌, ಆಧಾರ್‌ ಪರಿಶೀಲನೆ, ಇಮೇಲ್‌ ಪರಿಶೀಲನೆ ಹಾಗೂ ಆನ್‌ಲೈನ್‌ ಮನವಿಗಳ ಸ್ಥಿತಿಗಳನ್ನು ಪರಿಶೀಲಿಸಬಹುದು.

* ಆ್ಯಪ್‌ ಮೂಲಕವೇ ಆಧಾರ್ ಅಥವಾ ಬಯೋಮೆಟ್ರಿಕ್‌ನ್ನು ಲಾಕ್‌ ಇಲ್ಲವೇ ಅನ್‌ಲಾಕ್‌ ಮಾಡಿಕೊಳ್ಳಬಹುದು.

* ಎಸ್‌ಎಂಎಸ್‌ ಮೂಲಕವೂ ಸೇವೆ ಪಡೆಯಬಹುದು. ಸಮೀಪದ ನೋಂದಣಿ ಕೇಂದ್ರಗಳ ಮಾಹಿತಿಯನ್ನು ಆ್ಯಪ್‌ನಲ್ಲಿ ಪಡೆಯಬಹುದು.

* ರೈಲುಗಳಲ್ಲಿ ಪ್ರಯಾಣಿಸುವಾಗ ಟಿಕೆಟ್‌ನೊಂದಿಗೆ ಗುರುತಿಗಾಗಿ ಎಂಆಧಾರ್‌ನಲ್ಲಿ ಆಧಾರ್‌ ಸಾಫ್ಟ್‌ ಕಾಪಿಯನ್ನು ತೋರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.