ADVERTISEMENT

ವಿವೊ ಸ್ಮಾರ್ಟ್‌ ಹೆಲ್ತ್‌ ಸ್ಟ್ರಿಪ್‌

​ಪ್ರಜಾವಾಣಿ ವಾರ್ತೆ
Published 1 ಮೇ 2019, 19:30 IST
Last Updated 1 ಮೇ 2019, 19:30 IST
ಹೆಲ್ತ್ ಟ್ರಿಪ್ಸ್
ಹೆಲ್ತ್ ಟ್ರಿಪ್ಸ್   

ಫಿಟ್ನೆಸ್‌ ಕಾಳಜಿಯುಳ್ಳವರಿಗಾಗಿ ಗಾರ್ಮಿನ್‌ ಇಂಡಿಯಾ ಕಂಪನಿ ವಿವೊ ಸ್ಮಾರ್ಟ್‌ – 4 ಮಣಿಕಟ್ಟಿನ ಪಟ್ಟಿ (ಹೆಲ್ತ್‌ ಸ್ಟ್ರಿಪ್‌) ಬಿಡುಗಡೆ ಮಾಡಿದೆ. ಫಿಟ್ನೆಸ್‌ ಪರಿಕರಗಳ ಸರಣಿಯಲ್ಲಿ ಇದೊಂದು ಹೊಸ ಅನ್ವೇಷಣೆ. ಓಟಗಾರರು, ಸೈಕ್ಲಿಸ್ಟ್‌ಗಳು, ಈಜುಗಾರರು, ಕ್ರೀಡಾಪ‍ಟುಗಳು, ಯೋಗಪಟುಗಳು ತಮ್ಮ ಆರೋಗ್ಯದ ಸ್ಥಿತಿಗತಿ ಬಗ್ಗೆ ನಿಖರ ಮಾಹಿತಿ ತಿಳಿದುಕೊಳ್ಳಲು ನೆರವಾಗಲಿದೆ.

ಏನೇನು ಮಾಹಿತಿ?

ನಾಡಿ ಮಿಡಿತ, ರಕ್ತದೊತ್ತಡ, ಆಮ್ಲಜನಕದ ಪ್ರಮಾಣ, ದೇಹದಲ್ಲಿರುವ ಮೀಸಲು ಶಕ್ತಿಯ ಪ್ರಮಾಣ, ಬಳಕೆಯಾದ ಶಕ್ತಿ, ವಿಶ್ರಾಂತಿಯ ಅವಧಿ ಇತ್ಯಾದಿ ಮಾಹಿತಿಯನ್ನು ಈ ಪಟ್ಟಿ ಒದಗಿಸುತ್ತದೆ.

ADVERTISEMENT

ನಿದ್ರೆಯ ಹಂತ ಹಾಗೂ ಪ್ರಮಾಣವನ್ನೂ ತಿಳಿಸುತ್ತದೆ. ನಿದ್ರೆ ಬಗ್ಗೆ ತಿಳಿದುಕೊಳ್ಳಲು ರಾತ್ರಿ ವೇಳೆಯೂ ಧರಿಸಬಹುದಾದ ಅನುಕೂಲಕರ ವಿನ್ಯಾಸ ಹೊಂದಿದೆ ಎಂದುಗಾರ್ಮಿನ್ ಇಂಡಿಯಾದ ರಾಷ್ಟ್ರೀಯ ಮಾರುಕಟ್ಟೆ ವ್ಯವಸ್ಥಾಪಕ ಅಲಿ ರಿಜ್ವಿ ಹೇಳುತ್ತಾರೆ.

ಪಟ್ಟಿಯ ಮಾಹಿತಿ ಫಲಕ (ಡಿಸ್ಪ್ಲೇ) ಸುಲಭವಾಗಿ ಓದಲು ಅನುಕೂಲವಾಗುವಂತಿದೆ. ಆರೋಗ್ಯದಲ್ಲೇನಾದರೂ ವ್ಯತ್ಯಯ ಆದಲ್ಲಿ ಸೂಚನೆ (ನೋಟಿಫಿಕೇಷನ್‌) ನೀಡುವ ವ್ಯವಸ್ಥೆಯೂ ಇದೆ. ಆ್ಯಂಡ್ರಾಯ್ಡ್‌ ಬಳಕೆದಾರರಿಗೆ ಲಿಖಿತ ಸೂಚನೆ/ ಮಾಹಿತಿಯೂ ಈ ಪಟ್ಟಿಯಿಂದ ಸಿಗುತ್ತದೆ. ಬ್ಯಾಟರಿಯನ್ನು ಒಮ್ಮೆ ಛಾರ್ಜ್‌ ಮಾಡಿದರೆ ಏಳು ದಿನಗಳ ಕಾಲ ಬಳಸಬಹು್ದು. ಐದು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಬೆಲೆ ₹ 12,990.ವಿವೊಸ್ಮಾರ್ಟ್ 4 ಗ್ರಾಹಕರಿಗೆ ಗಾರ್ಮಿನ್ ಬ್ರ್ಯಾಂಡ್ ಸ್ಟೋರ್, ಬೆಂಗಳೂರು ಮತ್ತು ಹೆಲಿಯೋಸ್ ವಾಚ್ ಸ್ಟೋರ್‌ಗಳಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.