ADVERTISEMENT

ವೈಲ್ಡ್ ಟ್ರಯಲ್ಸ್ ಆ್ಯಪ್

ವನ್ಯಜೀವಿ ಪ್ರೇಮಿಗಳ ನೆಚ್ಚಿನ ಆ್ಯಪ್

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 19:45 IST
Last Updated 6 ಫೆಬ್ರುವರಿ 2019, 19:45 IST
   

ಬಂಡೀಪುರದ ಅರಣ್ಯದಲ್ಲಿ ಹುಲಿ ಫೋಟೊ ತೆಗೆಯಲು ಮೂರು ದಿನಗಳಿಂದ ಕಾಯುತ್ತಿದ್ದಾರೆ ವನ್ಯಜೀವಿ ಛಾಯಾಗ್ರಾಹಕ ರಮೇಶ್. ಆದರೆ, ಅವರಿಗೆ ಹುಲಿ ಇರಲಿ, ಅದರ ಹೆಜ್ಜೆಯ ದರ್ಶನವೂ ಇಲ್ಲ.

ಪಕ್ಷಿತಜ್ಞ ಸುಂದರ್, ಮಂಡಗದ್ದೆ ಪಕ್ಷಿಧಾಮದಲ್ಲಿ ಅಪರೂಪದ ಉದ್ದ ಮೂತಿಯ ಕೊಕ್ಕರೆಯ ಜೀವನಕ್ರಮ ಅಭ್ಯಾಸ ನೋಡಲು ಬೈನಾಕ್ಯುಲರ್ ಹಿಡಿದು ಕಾಯುತ್ತಿದ್ದಾರೆ. ಆದರೂ ಪಕ್ಷಿ ಸಿಕ್ಕಿಲ್ಲ. ಒರಿಸ್ಸಾದ ಸಮೀಪದ ಸರೋವರವೊಂದರಲ್ಲಿ ಮೊಸಳೆಗಳೆಲ್ಲಾ ದಡದಲ್ಲಿ ಸೇರುತ್ತವೆ ಎಂದು ತಿಳಿದ ಆರ್. ಪಿ.ನಾಯರ್, ಕನ್ಯಾಕುಮಾರಿಯಿಂದ, ಅಲ್ಲಿಗೆ ಓಡೋಡಿ ಬಂದಿದ್ದಾರೆ. ಆದರೆ, ಮೊಸಳೆಗಳೊಂದೂ ಕಂಡಿಲ್ಲ.

ವನ್ಯಜೀವಿ ಧಾಮಗಳಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ಪಕ್ಷಿಪ್ರಿಯರು,ವನ್ಯಜೀವಿಪ್ರೇಮಿಗಳು,ಛಾಯಾಗ್ರಾಹಕರು,ಹವ್ಯಾಸಿಪ್ರವಾಸಿಗರು ಕಾದು ಕುಳಿತು ಕೊನೆಗೆ ಬರಿಗೈಯಲ್ಲಿ ವಾಪಸ್ ಬಂದ ಉದಾಹರಣೆಗಳಿವೆ. ಇವೆಲ್ಲ ಸರಿಯಾದ ಮುನ್ಸೂಚನೆ ಮಾರ್ಗದರ್ಶನ ನೀಡುವ ವ್ಯವಸ್ಥೆ ಇಲ್ಲದೇ ಕಾರಣ. ಇಂಥದ್ದನ್ನು ಗಮನಿಸಿದ, ಸಾಫ್ಟ್‌ವೇರ್‌ ಎಂಜಿನಿಯರ್, ವನ್ಯಜೀವಿ ಪ್ರಿಯ ಮಂಜುನಾಥಗೌಡ ಅವರು ‘ವನ್ಯಜೀವಿಗಳನ್ನು ನೋಡಲೆಂದೇ ಪ್ರವಾಸಕ್ಕೆ ತೆರಳುವವರಿಗೆ ಗೈಡ್ ಮಾಡಲೆಂದೇ ಒಂದು ಆ್ಯಪ್ ಸಿದ್ಧಪಡಿಸಿದ್ದಾರೆ.

ADVERTISEMENT

ಅದರಲ್ಲಿ ವನ್ಯಜೀವಿಗಳು ಸಿಗುವ ಸ್ಥಳ, ಅವುಗಳನ್ನು ನೋಡಲು ಹೋಗಲು ಸರಿಯಾದ ಸಮಯ, ಅವುಗಳು ಯಾವ ಸಮಯಕ್ಕೆ ಬರುತ್ತವೆ ಎಂಬಂತಹ ಮಾಹಿತಿಯನ್ನು ನಿಮ್ಮ ಅಂಗೈಯಲ್ಲೇ ನೀಡುವ ಸಲುವಾಗಿ ಈ ಆ್ಯಪ್ ಕಾರ್ಯನಿರ್ವಹಿಸುತ್ತಿದೆ. ಅದರ ಹೆಸರು ‘ವೈಲ್ಡ್ಟ್ರಯಲ್ಸ್ಆ್ಯಪ್‌’.

ಒಮ್ಮೆ ಈ ಅಪ್ಲಿಕೇಷನ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡರೆ ಸಾಕು.ದೇಶ,ವಿದೇಶಗಳಮೂಲೆಮೂಲೆಯವನ್ಯಜೀವಿತಾಣಗಳಪರಿಚಯವಾಗುತ್ತದೆ.ಜೊತೆಗೆ ಆ ಸ್ಥಳದ ಸುತ್ತಮುತ್ತಲಿನ ಪ್ರವಾಸಿ ತಾಣ ಹಾಗೂ ಸಫಾರಿ ಸೇವೆಗಳ ಮಾಹಿತಿಯೂ ಲಭ್ಯವಾಗುತ್ತದೆ.

ವನ್ಯಜೀವಿ ಪ್ರಿಯರೂ ಆದ ಮಂಜುನಾಥ್ ಗೌಡ, 20 ವರ್ಷಗಳಿಂದ ಕಬಿನಿಗೆ ಭೇಟಿ ನೀಡುತ್ತಿದ್ದರು. ಅಲ್ಲಿಬೋರ್ಡ್ ಮೇಲೆ ಹುಲಿ ಕಾಣಿಸಿತು. ಚಿರತೆ ಕಾಣಿಸಿತು ಎಂದು ಬರೆಯುತ್ತಿದ್ದರು. ಆದರೆ ಅದು ಅವರಿಗೆ ಅಲ್ಲಿ ಹೋದರಷ್ಟೇ ತಿಳಿಯುತ್ತಿತ್ತು. ಆದರೆ ದೂರದ ಬೆಂಗಳೂರಿನಲ್ಲಿರುವ ವನ್ಯಜೀವಿ ಪ್ರೇಮಿಗಳಿಗೆ ಈ ಬಗ್ಗೆ ಮಾಹಿತಿ ಸಿಗುವುದಿಲ್ಲ. ಇದನ್ನು ಮನಗಂಡ ಮಂಜುನಾಥ್, ‘ಇಂಥ ತಂತ್ರಜ್ಞಾನದ ಯುಗದಲ್ಲಿ ಏನೇನೋ ಮಾಡುತ್ತಾರೆ. ಹಾಗೆಯೇ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ಏಕೆ ಕಷ್ಟ ಪಡಬೇಕು. ಎಲ್ಲಾ ಅಭಯಾರಣ್ಯ ಹಾಗೂ ಪಕ್ಷಿಧಾಮಗಳ ಮಾಹಿತಿಗಳು ಒಂದೆಡೆ ಸಿಗುವಂತಾದರೆ ಎಷ್ಟು ಚೆನ್ನ ಎನ್ನಿಸಿತ್ತು. ಹೀಗೆ ಆ ಯೋಚನೆಯಲ್ಲಿದ್ದಾಗಲೇ ಹುಟ್ಟಿಕೊಂಡಿದ್ದು ವೈಲ್ಡ್ ಟ್ರಯಲ್ಸ್ ಆ್ಯಪ್.

ಆ್ಯಪ್‌ನ ಸ್ವರೂಪ
ಈ ಆ್ಯಪ್‌ನಲ್ಲಿ ವಿಶ್ವದ ಸುಮಾರು 1700 ವನ್ಯಜೀವಿ ಧಾಮಗಳ ಪರಿಚಯವಿದೆ. ಕರ್ನಾಟಕದ ಸುಮಾರು 60ಕ್ಕೂ ಹೆಚ್ಚು ಪ್ರಾಣಿ ಪಕ್ಷಿಗಳ ಧಾಮಗಳ ಪರಿಚಯ ಇದರಲ್ಲಿದೆ.

ಪ್ರತಿ ವನ್ಯಜೀವಿಧಾಮಗಳಮಾಹಿತಿಯನ್ನುಕಲೆಹಾಕಲುಗೈಡ್ಗಳಿಗಾಗಿಇನ್ನೊಂದುಆ್ಯಪ್ಅನ್ನುರಚಿಸಿದ್ದಾರೆ.ಅದರಲ್ಲಿ ಗೈಡ್ ಗಳು ತಮ್ಮ ತಮ್ಮ ಸ್ಥಳದ ಕುರಿತ ಪ್ರತಿದಿನದ ಅಪ್ ಡೇಟ್ ಅನ್ನು ತಿಳಿಸುತ್ತಾರೆ. ಆ ಅಪ್ ಡೇಟ್ ಗಳನ್ನು ಆಧರಿಸಿ ವೈಲ್ಡ್ ಟ್ರಯಲ್ಸ್ ತನ್ನ ಗ್ರಾಹಕರಿಗೆ ಮಾಹಿತಿ ನೀಡುತ್ತದೆ.

ಒಮ್ಮೆ ಆ್ಯಪ್ ಮೂಲಕ ಟ್ರಿಪ್ ಬುಕ್ ಮಾಡಿಕೊಂಡರೆ ಪ್ಯಾಕೇಜ್ ರೂಪದಲ್ಲಿ ಟ್ರಿಪ್ ವ್ಯವಸ್ಥೆ ಇರುತ್ತದೆ. ಏರ್ ಪೋರ್ಟ್ ಅಥವಾ ಬಸ್ ಸ್ಟ್ಯಾಂಡಿನಿಂದ ಕರೆದ್ಯೊಯುವುದರಿಂದ ಹಿಡಿದುವನ್ಯಜೀವಿಧಾಮದಪ್ರವೇಶದರ,ಊಟ,ವಸತಿಎಲ್ಲವನ್ನೂಪ್ಯಾಕೇಜ್ಒಳಗೊಂಡಿರುತ್ತದೆ.ಗೈಡ್,ಸುಫಾರಿ,ಹೋಟೆಲ್ಎಲ್ಲವೂಪ್ಯಾಕೆಜ್‌ನಲ್ಲಿಯೇ ಬರುತ್ತದೆ.ಈ ಪ್ಯಾಕೇಜ್‌ಗಳುಸಧ್ಯಭಾರತಹಾಗೂಆಫ್ರಿಕಾದಎಲ್ಲಾಸ್ಥಳಗಳನ್ನುಒಳಗೊಂಡಿದೆ

70ರಿಂದ80ದೇಶಗಳವನ್ಯಜೀವಿಧಾಮಗಳಮಾಹಿತಿಈಆ್ಯಪ್‌ನಲ್ಲಿಲಭ್ಯವಿದೆ.

ಆ್ಯಪ್ ನಲ್ಲಿ ಟ್ರಿಪ್ ಗಳನ್ನು ನಾವೇ ಡಿಸೈನ್ ಮಾಡಿಕೊಂಡು ಆ ಮೂಲಕ ನಮಗಿಷ್ಟ ಬಂದ ಜಾಗಕ್ಕೆ ಹೋಗುವ ವ್ಯವಸ್ಥೆ ಸಿಗುವುದು ಇನ್ನೊಂದು ವಿಶೇಷ.

ಮಂಜುನಾಥ್‌ ಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.