ಬಂಧನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಮಹಿಳೆಯೊಬ್ಬರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರಿಗೆ ಮೂಗುತಿ (ನೋಸ್ ಪಿನ್) ಸಹಾಯವಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಮಾರ್ಚ್ 8 ರಂದು ದಕ್ಷಿಣ ದೆಹಲಿಯ ಚರಂಡಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆರಂಭದಲ್ಲಿ ಯಾವುದೇ ಸಾಕ್ಷ್ಯಾಧಾರಗಳು ದೊಕಿರಲಿಲ್ಲ.
ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ ಪೊಲೀಸರು ಮಹಿಳೆ ಶವದ ಮೂಗಿನಲ್ಲಿ ಚಿಕ್ಕ ಮೂಗುತಿ ಪತ್ತೆಯಾಗಿತ್ತು. ಈ ಮೂಗುತಿ ಕೊಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರಿಗೆ ದಾರಿ ತೋರಿಸಿದೆ.
ಮೂಗುತಿಯನ್ನು ದಕ್ಷಿಣ ದೆಹಲಿಯ ಜ್ಯುವೆಲರಿ ಅಂಗಡಿಯೊಂದರಲ್ಲಿ ತೆಗೆದುಕೊಳ್ಳಲಾಗಿದೆ ಎಂಬ ಸಂಗತಿ ಪೊಲೀಸರಿಗೆ ತಿಳಿಯಿತು. ನಂತರ ಆ ಮೂಗುತಿಯನ್ನು ದೆಹಲಿ ಹೊರವಲಯದ ಉದ್ಯಮಿ ಅನಿಲ್ ಕುಮಾರ್ ಹೆಸರಿನಲ್ಲಿ ಖರೀದಿಸಲಾಗಿತ್ತು.
ಕೊಲೆಯಾದ ಮಹಿಳೆ ಉದ್ಯಮಿ ಅನಿಲ್ ಕುಮಾರ್ ಅವರ ಪತ್ನಿ 47 ವರ್ಷದ ಸೀಮಾ ಸಿಂಗ್ ಎಂದು ಪತ್ತೆಯಾಯಿತು. ಕೌಟುಂಬಿಕ ಕಲಹದಿಂದ ಅನಿಲ್ ಕುಮಾರ್ ಅವರು ತಮ್ಮ ಮನೆಯ ಸೆಕ್ಯೂರಿಟಿ ಗಾರ್ಡ್ ಜೊತೆ ಸೇರಿ ಸೀಮಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ಶವಕ್ಕೆ ಕಲ್ಲುಕಟ್ಟಿ ಚರಂಡಿಗೆ ಬೀಸಾಕಿದ್ದರು. ಸಾಕಷ್ಟು ತಯಾರಿ ಮಾಡಿಕೊಂಡು ಕೊಲೆ ಮಾಡಿದ್ದ ಆರೋಪಿಗಳು ಮೂಗುತಿ ಒಂದನ್ನು ಬಿಟ್ಟು ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯಲ್ಲಿ ಉದ್ಯಮಿ ಅನಿಲ್ ಕುಮಾರ್ ತಪ್ಪಿತಸ್ಥ ಎಂದು ತಿಳಿದು ಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿರುವುದಾಗಿ ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.ಕೊಲೆ ಪ್ರಕರಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.