ADVERTISEMENT

ಈ ಸುಂದರನ ಸನ್ಯಾಸಿ ಮಾಡಬಹುದೇ.. ಇವರೇ ನೋಡಿ ಆ ಹಾಡು ಹಾಡಿದವರು

ಪೂರ್ತಿ ಹಾಡು ಇಲ್ಲಿದೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2023, 7:23 IST
Last Updated 14 ಜೂನ್ 2023, 7:23 IST
   

ಬೆಂಗಳೂರು: ಇತ್ತೀಚೆಗೆ ಇನ್‌ಸ್ಟಾಗ್ರಾಂನ ರೀಲ್ಸ್, ಯೂಟ್ಯೂಬ್ ಶಾರ್ಟ್ ವಿಡಿಯೊ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ‘ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂಬ ಹಾಡು ಸಕತ್ ವೈರಲ್ ಆಗುತ್ತಿದೆ.

ಅನೇಕರು ಈ ಹಾಡಿನ ತುಣಕನ್ನು ಇಟ್ಟುಕೊಂಡೇ ಶಾರ್ಟ್ ವಿಡಿಯೊಗಳನ್ನು ರಚಿಸುತ್ತಿದ್ದಾರೆ. ಆದರೆ, ಆ ಹಾಡಿನ ಮೂಲ ಯಾವುದು? ಯಾರು ಹಾಡಿದ್ದು? ಪೂರ್ಣ ಹಾಡು ಎಲ್ಲಿದೆ? ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಈ ಹಾಡನ್ನು ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹಾಡಿದ್ದಾರೆ. ಇವರು ಮಂಡ್ಯ ಮೂಲದವರು.

ADVERTISEMENT

ಝೇಂಕಾರ್ ಮ್ಯೂಸಿಕ್‌ಗಾಗಿ ಅವರು ‘ಅರ್ಜುನನ ಜೋಗಿ ಪದಗಳು’ ಎಂಬ ಆಲ್ಬಂಗೆ ಈ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿನ ಮೂರನೇ ಭಾಗದಲ್ಲಿ ‘ಅನ್ಯಾಯಕಾರಿ ಬ್ರಹ್ಮ.. ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂಬ ಹಾಡು ಇದೀಗ ವೈರಲ್ ಆಗಿದೆ.

ಮಹದೇವಸ್ವಾಮಿ ಅವರು ಅನೇಕ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿ ‘ಮಹದೇಶ್ವರ ದಯ ಬಾರದೇ’ ಗೀತೆ ಹೆಚ್ಚು ಪ್ರಸಿದ್ದಿ ತಂದು ಕೊಟ್ಟಿದೆ.

ಮಳವಳ್ಳಿ ಮಹದೇವಸ್ವಾಮಿ ಅವರ ಸಂದರ್ಶನ ನೋಡಲು ಇಲ್ಲಿ ಕ್ಲಿಕ್ಕಿಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.