ADVERTISEMENT

ವೈರಲ್ ವಿಡಿಯೊ: ಹೆದ್ದಾರಿಗೆ ಬಂದು ಟ್ರಾಫಿಕ್ ಜಾಮ್ ಮಾಡಿದ ದೈತ್ಯ ಹೆಬ್ಬಾವು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2022, 7:03 IST
Last Updated 12 ಜನವರಿ 2022, 7:03 IST
ಹೆಬ್ಬಾವು
ಹೆಬ್ಬಾವು   

ಬೆಂಗಳೂರು: ವಾಹನ ದಟ್ಟಣೆಯ ಹೆದ್ದಾರಿ ಮೇಲೆ ಹೆಬ್ಬಾವೊಂದು ಬಂದು ಕಡೆಗೂ ಸುರಕ್ಷಿತವಾಗಿ ಕಾಡಿಗೆ ಮರಳಿರುವ ಘಟನೆ ಕೇರಳದಲ್ಲಿ ನಡೆದಿದೆ.

ಸದಾ ವಾಹನ ದಟ್ಟಣೆಯಿಂದ ಕೂಡಿರುವ ಕೊಚ್ಚಿಯ ವಿಮಾನ ನಿಲ್ದಾಣ ಹಾಗೂ ಸೀ ಪೋರ್ಟ್‌ ರಸ್ತೆಯ ಮೇಲೆದೈತ್ಯ ಇಂಡಿಯನ್ ರಾಕ್ ಫೈಥಾನ್ ತೆವಳುತ್ತಾ ಬಂದಿದೆ. ಅದರ ಅದೃಷ್ಟವೇನೋ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಿ ಸುರಕ್ಷಿತವಾಗಿ ಕಾಡಿಗೆ ತೆರಳಲು ಅವಕಾಶ ಮಾಡಿ ಕೊಟ್ಟಿದ್ದಾರೆ.

ಈ ಘಟನೆ ಕಳೆದ ಮಂಗಳವಾರ ಸಂಜೆ ನಡೆದಿದ್ದು, ಹಲವು ಪ್ರಾಣಿ ಪ್ರಿಯರು ಈ ವಿಡಿಯೊ ಹಂಚಿಕೊಂಡು ವಾಹನ ಸವಾರರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ADVERTISEMENT

ಹೆಬ್ಬಾವಿನಿಂದ ಸುಮಾರು 10 ನಿಮಿಷ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ. ಕಾಡುಗಳಲ್ಲಿ ವಾಸಿಸುವ ಇಂಡಿಯನ್ ರಾಕ್ ಫೈಥಾನ್‌ಗಳು ಸಾಮಾನ್ಯವಾಗಿ ರಸ್ತೆ ಮೇಲೆ ಬರುವುದು ಅಪರೂಪ. ಭೇಟೆಯಾಡಿ ತೆವಳಲು ಆಗದೇ ಕೆಲ ಸಲ ತೊಂದರೆ ಅನುಭವಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.