ಹೈದರಾಬಾದ್: ಮಹಿಳೆಯೊಬ್ಬರು ಗುರುವಾರ ಬೆಳಿಗ್ಗೆ ನಗರದ ಹೊರವಲಯದಲ್ಲಿ ರೈಲು ಹಳಿಗಳ ಮೇಲೆ ಕಾರು ಚಾಲನೆ ಮಾಡಿದ್ದು, ಆತಂಕ ಮೂಡಿಸಿತು. ಇದರಿಂದಾಗಿ ರೈಲ್ವೆ ಸಂಚಾರದಲ್ಲಿಯೂ ವ್ಯತ್ಯಯವಾಯಿತು.
ಹೊರವಲಯದ ಶಂಕರಪಲ್ಲಿ ಬಳಿ ಸುಮಾರು ಎಂಟು ಕಿ.ಮೀ ದೂರದವರೆಗೆ ಮಹಿಳೆ ಕಾರು ಓಡಿಸಿದ್ದಾರೆ. ಕಾರು ನಿಲ್ಲಿಸಿದಾಗ ಪೊಲೀಸರ ಜೊತೆಗೂ ಸಂಘರ್ಷಕ್ಕೆ ಮುಂದಾಗಿದ್ದಾರೆ. ಮಹಿಳೆ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಎನ್ನಲಾಗಿದೆ.
ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವೈದ್ಯಕೀಯ ತಪಾಸಣೆಗೆ ಕಳುಹಿಸಿದರು. ಮಹಿಳೆಯು ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿ ಎನ್ನಲಾಗಿಎ. ರೈಲ್ವೆ ಠಾಣೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.