ADVERTISEMENT

ಆಹಾ ಅಡುಗೆ: ಬೇಕಿಂಗ್ ಭಕ್ಷ್ಯ ವೈವಿಧ್ಯ....

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST
ಆಹಾ ಅಡುಗೆ: ಬೇಕಿಂಗ್ ಭಕ್ಷ್ಯ ವೈವಿಧ್ಯ....
ಆಹಾ ಅಡುಗೆ: ಬೇಕಿಂಗ್ ಭಕ್ಷ್ಯ ವೈವಿಧ್ಯ....   


ಖರ್ಜೂರ ಕೇಕ್
ಬೇಕಾಗುವ ಪದಾರ್ಥಗಳು : ಖರ್ಜೂರ - 18, ಹಾಲು - 3/4 ಕಪ್, ಸಕ್ಕರೆ - 3/4 ಕಪ್, ಮೈದಾ - 1 ಕಪ್
ಬೇಕಿಂಗ್ ಪೌಡರ್ - 1 ಟೀ ಸ್ಪೂನ್.

ಮಾಡುವ ವಿಧಾನ : ಖರ್ಜೂರಗಳನ್ನು ಹಿಂದಿನ ರಾತ್ರಿ ಹಾಲಿನಲ್ಲಿ ನೆನೆಸಿಡಿ. ಮರುದಿನ ಬೀಜ ತೆಗೆದು ಅದೇ ಹಾಲಿನೊಟ್ಟಿಗೆ ಸಕ್ಕರೆಯನ್ನು ಬೆರೆಸಿ ನುಣ್ಣಗೆ ರುಬ್ಬಿ. ಇದಕ್ಕೆ ಮೈದಾ ಮತ್ತು ಬೇಕಿಂಗ್ ಪೌಡರ್ ಹಾಕಿ ಕಲೆಸಿ.
 ಪ್ರೀ ಹೀಟ್ ಮಾಡಿದ ಓವನ್‌ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 35-40 ನಿಮಿಷ ಬೇಕ್ ಮಾಡಿ. ಮನ ಬಯಸಿದ ಐಸಿಂಗ್‌ನಿಂದ ‘ಕೇಕ್ ಡೆಕೋರೇಟ್’ ಕೂಡ ಮಾಡಬಹುದು.

ಪೀನಟ್ ಕುಕೀಸ್
ಬೇಕಾಗುವ ಪದಾರ್ಥಗಳು :  ಮೈದಾ 1 ಕಪ್, ಓಟ್ಸ್ 1 ಕಪ್,
ಹುರಿದ, ತರಿ ತರಿ ನೆಲಗಡಲೆ 1/2 ಕಪ್, ಸಕ್ಕರೆ ಪುಡಿ 1 ಕಪ್,
ಲೆಮನ್ ರಿಂಡ್( ಲಿಂಬೆ ಸಿಪ್ಪೆಯ ತುರಿ )  1 ಟೀ ಸ್ಪೂನ್
ಬೇಕಿಂಗ್ ಪೌಡರ್ 1 ಟೀ ಸ್ಪೂನ್ ಹಾಗೂ ಪೀನಟ್ ಬಟರ್ 1 ಟೇಬಲ್ ಸ್ಪೂನ್.
ಮಾಡುವ ವಿಧಾನ : ಮೈದಾದೊಟ್ಟಿಗೆ ಬೇಕಿಂಗ್ ಪೌಡರ್, ಓಟ್ಸ್, ನೆಲಗಡಲೆ ತುರಿ, ಸಕ್ಕರೆ ಪುಡಿ, ಲೆಮನ್ ರಿಂಡ್ ಮತ್ತು ಪೀನಟ್ ಬಟರ್ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ನಾದಿ. ಬೇಕಿಂಗ್ ಟ್ರೇ ಮೇಲೆ ತುಪ್ಪ ಸವರಿ ಚಿಕ್ಕ ಚಿಕ್ಕ ಉಂಡೆ ಮಾಡಿ ಸ್ವಲ್ಪ ಒತ್ತಿ ಕುಕೀಸ್ ಆಕಾರ ಕೊಟ್ಟು ಜೋಡಿಸಿ. ಪ್ರೀ ಹೀಟ್ ಮಾಡಿದ ಓವನ್‌ನಲ್ಲಿ  150 ಡಿಗ್ರಿ ಸೆಲ್ಸಿಯಸ್‌ನಲ್ಲಿ 15 ನಿಮಿಷ ಬೇಕ್ ಮಾಡಿ. ತಣಿಸಿ ಡಬ್ಬದಲ್ಲಿ ತುಂಬಿಡಿ.

ಖಾರಾ ಬನ್
ಬೇಕಾಗುವ ಪದಾರ್ಥಗಳು:  ಮೈದಾ  1 ಕಪ್,  ಗೋಧಿ ಹಿಟ್ಟು  1 ಕಪ್, ಬೇಯಿಸಿದ ಆಲೂ 1 ಕಪ್, ಕೊತ್ತಂಬರಿ ಸೊಪ್ಪು ಸ್ವಲ್ಪ, ಹಸಿಮೆಣಸಿನಕಾಯಿ 2, ಜೀರಿಗೆ 1 ಟೀ ಸ್ಪೂನ್, ಅರಿಶಿಣ  1 ಟೀ ಸ್ಪೂನ್, ಯೀಸ್ಟ್  1 ಟೀ ಸ್ಪೂನ್, ಎಣ್ಣೆ 1 ಟೀ ಸ್ಪೂನ್ ಹಾಗೂ ನೀರು  1 ಕಪ್.
ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಯೀಸ್ಟ್, ಸಕ್ಕರೆ, ಎಣ್ಣೆ, ಉಪ್ಪನ್ನು ಹಾಕಿ 10 ನಿಮಿಷ ಬಿಡಿ. ನಂತರ ಜೀರಿಗೆ, ಅರಿಶಿಣ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಮೈದಾ, ಗೋಧಿ ಹಿಟ್ಟು, ಬೇಯಿಸಿದ ಆಲೂ ಹಾಕಿ ಚೆನ್ನಾಗಿ ನಾದಿ. ಬೇಕೆನಿಸಿದಲ್ಲಿ ಸ್ವಲ್ಪ ಸ್ವಲ್ಪವೇ ನೀರನ್ನು ಹಾಕಿಕೊಳ್ಳಿ.
ಎಣ್ಣೆ ಸವರಿದ ಪಾತ್ರೆಗೆ ಈ ಹಿಟ್ಟನ್ನು ಹಾಕಿ 1 ಗಂಟೆ ಬಿಡಿ. ಹಿಟ್ಟು ಗಾತ್ರದಲ್ಲಿ ಉಬ್ಬಿ ಎರಡರಷ್ಟಾಗುತ್ತದೆ.
 ಇದನ್ನು ಪುನಃ ಚೆನ್ನಾಗಿ ನಾದಿ. ಎಣ್ಣೆ ಸವರಿದ ಬೇಕಿಂಗ್ ಟ್ರೇ ಮೇಲೆ ಸಣ್ಣ ಸಣ್ಣ ಉಂಡೆ ಮಾಡಿ ಬನ್ ಆಕಾರ ಕೊಟ್ಟು ಜೋಡಿಸಿ. 1 ಗಂಟೆ ಬಿಡಿ. ನಂತರ ಪ್ರೀ ಹೀಟ್ ಮಾಡಿದ ಓವನ್‌ನಲ್ಲಿ 200 ಡಿಗ್ರಿ ಸೆಲ್ಸಿಯಸ್‌ನಲ್ಲಿ 15ನಿಮಿಷ ಬೇಕ್ ಮಾಡಿ. ಖಾರ ಬನ್ ರೆಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.