ADVERTISEMENT

ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2014, 19:30 IST
Last Updated 7 ಮಾರ್ಚ್ 2014, 19:30 IST

ಮರೆತ ಪತ್ರ ಸಂಸ್ಕೃತಿ ‘ಎಲ್ಲಿ ಹೋದವೊ ಓಲೆಗಳು’
(ಭೂಮಿಕಾ, 1–3–2014) ಮನುಷ್ಯರ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ತನ್ನದೇ ಪಾತ್ರ ಹೊಂದಿರುವ ಪತ್ರ ಸಂಸ್ಕೃತಿ ಇದೀಗ ತಂತ್ರಜ್ಞಾನದ ಹಾವಳಿಯಿಂದಾಗಿ ಕಣ್ಮರೆಯಾಗುತ್ತಿದೆ. ಆ ಕಾಲದ ಪತ್ರ ವ್ಯವಹಾರದ ಸೂಕ್ಷ್ಮತೆಯನ್ನು ಅರ್ಥಪೂರ್ಣವಾಗಿ ಬಿಡಿಸಿ ಇಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
–ಕುಬೇರಪ್ಪ ಎಂ.ವಿಭೂತಿ, ಹರಿಹರ

ಅಹಂಕಾರ ಮೀರಿ..
ಅಹಂಕಾರ ಮನಸ್ಸಿನ ಮೇಲೆ ಹಿಡಿತ ಸಾಧಿಸಿದಾಗ ನಾವು ಸಣ್ಣ ಜಗತ್ತಿನಲ್ಲಿ ಜೀವಿಸುತ್ತೇವೆ ಎನ್ನುವ ಸತ್ಯವನ್ನು ಸಾರಿದ ಶಾಲಿನಿ ಸವೂರ ಅಂಕಣ ಅರ್ಥಪೂರ್ಣವಾಗಿತ್ತು.
–ಎಚ್.ಆನಂದ್ ಕುಮಾರ್, ಚಿತ್ರದುರ್ಗ

ಉಪಯುಕ್ತ ಮಾಹಿತಿ
ವಾರದ ವೈದ್ಯ ಆಹಾರ ಔಷಧವಾಗಲಿ ಸಂದರ್ಶನ ನಿಜಕ್ಕೂ ಉಪಯುಕ್ತವಾಗಿತ್ತು. ಔಷಧಗಳೇ ಆಹಾರವಾಗುತ್ತಿರುವ ಈ ದಿನಗಳಲ್ಲಿ ಆಹಾರದ ಮಹತ್ವ ಮತ್ತು ಯಾವ ರೋಗಕ್ಕೆ ಯಾವುದು ಔಷಧಿ ಎಂದು ತಿಳಿಸಿದ್ದು ಮಾಹಿತಿ ಪೂರ್ಣವಾಗಿತ್ತು.
–ಅ.ಮೃತ್ಯುಂಜಯ, ಶಾಂತಿನಗರ, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.