ADVERTISEMENT

Mother's Day 2025: ತಾಯಿಯ ತ್ಯಾಗ, ಪ್ರೀತಿಗೆ ನಮಿಸುವ ದಿನವಿದು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2025, 5:51 IST
Last Updated 11 ಮೇ 2025, 5:51 IST
<div class="paragraphs"><p>ಸಾಂಕೇತಿಕ ಚಿತ್ರ</p></div>

ಸಾಂಕೇತಿಕ ಚಿತ್ರ

   

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವ ಹೀಗಿದೆ..

'ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ' ಎನ್ನುವ ಮಾತಿದೆ. ಅಂದರೆ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂದು. ತಾಯಿಯ ತ್ಯಾಗ, ಆಕೆಯ ಪರಿಶುದ್ಧ ಹಾಗೂ ನಿಶ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ. ತಾನು ನೋವುಂಡು, ಮಕ್ಕಳಿಗೆ ಖುಷಿಯನ್ನೇ ನೀಡುವ ತಾಯಿಗೆ ಗೌರವವನ್ನು ಸಲ್ಲಿಸುವ ದಿನವಿದು.

ADVERTISEMENT

ತಾಯಂದಿರ ದಿನದ ಇತಿಹಾಸ

ತಾಯಂದಿರನ್ನು ಗೌರವಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದ್ದರೂ, ತಾಯಂದಿರ ದಿನದ ಆಚರಣೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು ಅಮೆರಿಕದಲ್ಲಿ. 20ನೇ ಶತಮಾನದ ಆರಂಭದಲ್ಲಿ ಅನ್ನಾ ಜಾರ್ವಿಸ್‌ ಎನ್ನುವ ಮಹಿಳೆ ತನ್ನ ತಾಯಿ ಆನ್ ರೀವ್ಸ್ ಜಾರ್ವಿಸ್ ಅವರ ಸ್ಮರಣಾರ್ಥ ಮೊದಲ ಬಾರಿಗೆ ತಾಯಂದಿರ ದಿನವನ್ನು ಆಚರಿಸಿದರು.

ತನ್ನ ತಾಯಿಯ ಸೇವೆ ಮತ್ತು ತ್ಯಾಗವನ್ನು ಗೌರವಿಸಲು ಅವರು 1908ರಲ್ಲಿ ಪಶ್ಚಿಮ ವರ್ಜೀನಿಯಾದಲ್ಲಿ ತಾಯಂದಿರ ದಿನವನ್ನು ಪ್ರಾರಂಭಿಸಿದರು. ಅವರಿಂದ ಪ್ರೇರಿತರಾದ ಅಮೆರಿಕದ ಆಗಿನ ಅಧ್ಯಕ್ಷ ವುಡ್ರೋ ವಿಲ್ಸನ್ ಅವರು 1914 ರಲ್ಲಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಅಧಿಕೃತವಾಗಿ ಘೋಷಿಸಿದರು.

ಅಂದಿನಿಂದ ಅಮೆರಿಕ, ಯುರೋಪ್ ಹಾಗೂ ಭಾರತ ಸೇರಿದಂತೆ ಪ್ರಪಂಚದ ಹಲವೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ.

ತಾಯಂದಿರ ದಿನದ ಮಹತ್ವ:

ತಾಯಂದಿರ ಪ್ರೀತಿ ಮತ್ತು ತ್ಯಾಗವನ್ನು ಗೌರವಿಸಲು ಹಾಗೂ ಅವರಿಗೆ ಧನ್ಯವಾದ ತಿಳಿಸಲು ಇರುವ ವಿಶೇಷ ದಿನವಾಗಿದೆ.

ತಾಯಂದಿರ ದಿನವನ್ನು ಹೇಗೆ ಆಚರಿಸಲಾಗುತ್ತದೆ?

ತಾಯಂದಿರ ದಿನವನ್ನು ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಕೆಲವರು ಈ ದಿನದಂದು, ತಮ್ಮ ತಾಯಂದಿರಿಗೆ ಮನೆಕೆಲಸಗಳಿಂದ ವಿರಾಮ ನೀಡಿ ಅವರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಾರೆ. ಇನ್ನು ಕೆಲವರು ಅವರ ನೆಚ್ಚಿನ ಉಡುಗೊರೆಯನ್ನು ನೀಡುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸುತ್ತಾರೆ.

ಒಟ್ಟಾರೆ ಇದು ತಾಯಿಯ ಪ್ರೀತಿ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲು ಇರುವಂತಹ ವಿಶೇಷ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.