ADVERTISEMENT

ಸಮಾಧಾನವೇ ಬದುಕು

ನಡಹಳ್ಳಿ ವಂಸತ್‌
Published 10 ಏಪ್ರಿಲ್ 2020, 19:45 IST
Last Updated 10 ಏಪ್ರಿಲ್ 2020, 19:45 IST

ಸಹಪಾಠಿಯೊಬ್ಬಳು ಅಣ್ಣ ಎನ್ನುತ್ತ ನನ್ನ ಜೊತೆ ಆತ್ಮೀಯವಾಗಿದ್ದಳು. ಈಗ ಅವಳು ಹುಡುಗನನೊಬ್ಬನನ್ನು ಪ್ರೀತಿಸುತ್ತಿದ್ದು ಅವನಿಗಾಗಿ ನನ್ನಿಂದ ದೂರವಾಗಿದ್ದಾಳೆ. ನಾನು ಅಣ್ಣನಾಗಿ ಅವಳಿಗೆ ಮಾಡಬೇಕಾದ್ದು ಮಾಡಲೋ ಅಥವಾ ಹಾಳಾಗಿ ಹೋಗಲಿ ಎಂದು ಸುಮ್ಮನಾಗಲೋ?

-ಹೆಸರು, ಊರು ಇಲ್ಲ.

ಸಹಪಾಠಿಗೆ ನೀವು ಒಡಹುಟ್ಟಿದವರಲ್ಲ, ಅವಳೇ ಕೊಟ್ಟಿದ್ದ ಅಣ್ಣನ ಸ್ಥಾನವನ್ನು ಅವಳೇ ಕಿತ್ತುಕೊಂಡಿದ್ದಾಳೆ. ಅದು ಅವಳ ಸ್ವಾತಂತ್ರ್ಯವಲ್ಲವೇ? ಅಣ್ಣನ ಸ್ಥಾನವೇ ಹೋದ ಮೇಲೆ ನೀವೇನು ಮಾಡಲು ಸಾಧ್ಯ? ಒಡಹುಟ್ಟಿದವನಾಗಿದ್ದರೂ ವಯಸ್ಕಳಾದ ಅವಳ ಜೀವನದಲ್ಲಿ ಅನಗತ್ಯವಾಗಿ ಮೂಗು ತೂರಿಸಲು ನಿಮಗೆ ಅಧಿಕಾರವಿರುತ್ತಿರಲಿಲ್ಲ.

ADVERTISEMENT

ಅಣ್ಣನ ಸ್ಥಾನ ಹೋಗಿದ್ದಕ್ಕೆ ಅವಳು ಹಾಳಾಗಿ ಹೋಗಲಿ ಎಂದು ಶಪಿಸುತ್ತಿದ್ದೀರಲ್ಲವೇ? ಇಂತಹ ಕೋಪ ನಿಮ್ಮ ಮನಶ್ಶಾಂತಿಯನ್ನು ಕೆಡಿಸುತ್ತಿಲ್ಲವೇ? ಹುಡುಗಿಯನ್ನು ಮರೆತು ನಿಮ್ಮ ಸಮಾಧಾನವನ್ನು ಹೇಗೆ ಕಂಡುಕೊಳ್ಳುವುದು ಎಂದು ಯೋಚಿಸಿದರೆ ನಿಮ್ಮ ಓದು ಮತ್ತು ಜೀವನಕ್ಕೆ ಸಹಾಯವಾಗಬಹುದು.

(ಅಂಕಣಕಾರ ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.