ADVERTISEMENT

ಆದಾಯದಲ್ಲಿ ಶೇ 20 ಕುಸಿತ ಎಂದ ಶಓಮಿ: ಚೀನಾದ ಕೋವಿಡ್ ನಿಯಮ ಕಾರಣ

ಶಓಮಿ ಆದಾಯದಲ್ಲಿ ಕುಸಿತ

ರಾಯಿಟರ್ಸ್
Published 19 ಆಗಸ್ಟ್ 2022, 16:29 IST
Last Updated 19 ಆಗಸ್ಟ್ 2022, 16:29 IST
   

ಶಾಂಘೈ: ಚೀನಾ ಮೂಲದ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ತಯಾರಿಕ ಕಂಪನಿ ಶಓಮಿ ಆದಾಯದಲ್ಲಿ ಕುಸಿತ ದಾಖಲಿಸಿದೆ.

ಚೀನಾದಲ್ಲಿ ಕೋವಿಡ್ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ಬಿಗಿ ನಿಯಮಗಳು ಮತ್ತು ನಿರ್ಬಂಧಗಳಿಂದಾಗಿ ಉತ್ಪಾದನೆ ಕುಸಿತ ಮತ್ತು ಮಾರಾಟ, ರಫ್ತು ಮೇಲೆ ಪರಿಣಾಮ ಉಂಟಾಗಿದ್ದು, ಅದರಿಂದಾಗಿ ಶೇ 20ರಷ್ಟು ಆದಾಯ ಇಳಿಕೆಯಾಗಿದೆ ಎಂದು ಕಂಪನಿ ಹೇಳಿದೆ.

ಶಾಂಘೈನಲ್ಲಿ ಹೇರಲಾಗಿದ್ದ ಲಾಕ್‌ಡೌನ್ ಪರಿಣಾಮ ಸ್ಮಾರ್ಟ್‌ಫೋನ್ ತಯಾರಿಕಾ ಘಟಕಗಳು ಕಾರ್ಯಾಚರಿಸುತ್ತಿರಲಿಲ್ಲ. ಅಲ್ಲದೆ, ಉತ್ಪಾದನೆಯ ಮೇಲೆ ಹೊಡೆತ ಬಿದ್ದಿತ್ತು. ಜತೆಗೆ ಅಂತರರಾಷ್ಟ್ರೀಯ ನಿರ್ಬಂಧಗಳಿಂದಾಗಿ ರಫ್ತು ಮೇಲೂ ಪರಿಣಾಮ ಉಂಟಾಗಿತ್ತು ಎಂದು ಶಓಮಿ ಹೇಳಿದೆ.

ADVERTISEMENT

ಶಓಮಿ ವಿವಿಧ ಗ್ಯಾಜೆಟ್‌ಗಳ ತಯಾರಿಕೆ ಮತ್ತು ಮಾರಾಟ ಇಳಿಕೆಯಾಗಿತ್ತು. ಅದರಲ್ಲಿ ಒಟ್ಟಾರೆ ಆದಾಯದಲ್ಲಿ ಶೇ 20ರಷ್ಟು ಇಳಿಕೆಯಾದರೆ, ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಬರುತ್ತಿದ್ದ ಆದಾಯದಲ್ಲಿ ಶೇ. 29ರಷ್ಟು ಇಳಿಕೆ ದಾಖಲಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಣಾ ಸಂಸ್ಥೆಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.