ADVERTISEMENT

ಬಾಹ್ಯಾಕಾಶ ನಿಲ್ದಾಣ ಘಟಕದಲ್ಲಿ ಸೌರಫಲಕಗಳನ್ನು ಅಳವಡಿಸಿದ ಗಗನಯಾನಿಗಳು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 11:54 IST
Last Updated 19 ಆಗಸ್ಟ್ 2021, 11:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನಾಸಾ ಹಾಗೂ ಜಪಾನಿನ ಗಗನಯಾನಿಗಳು ಬಾಹ್ಯಾಕಾಶ ನಿಲ್ದಾಣ ಘಟಕದಲ್ಲಿ ಸೌರಫಲಕಗಳನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಹ್ಯಾಕಾಶ ನಡಿಗೆಗೆ ತೆರಳಿದ್ದ ನಾಸಾದ ಮಾರ್ಕ್‌ ವೆಂಡೆ ಹಾಗೂ ಜಪಾನಿನ ಅಕಿಹಿಕೊ ಅವರು 10 ಸೌರಫಲಕಗಳನ್ನು ಅಳವಡಿಸಿದ್ದಾರೆ ಎಂದು ನಾಸಾ ವಿಜ್ಞಾನಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಮುಂದೆ ಬಾಹ್ಯಾಕಾಶ ನಿಲ್ದಾಣದಲ್ಲೇ ಸೌರ ವಿದ್ಯುತ್‌ ಉತ್ಪಾದನೆ ಮಾಡಲಾಗುವುದು.ಇದರಿಂದ ಎಲೆಕ್ಟ್ರಿಕಲ್‌ ಚಾರ್ಜಿಂಗ್ ಬ್ಯಾಟರಿಗಳ ಮೇಲಿನ ಅವಲಂಬನೆ ತಪ್ಪಲಿದೆ ಎಂದು ನಾಸಾ ಹೇಳಿದೆ.

ADVERTISEMENT

ಸಾಮಾನ್ಯವಗಿ ಗಗನಯಾನಿಗಳು ಬಾಹ್ಯಾಕಾಶ ನಿಲ್ದಾಣದಲ್ಲಿ ಯಾವುದೇ ದುರಸ್ತಿ ಹಾಗೂ ಅಳವಡಿಕೆ ಕೆಲಸಗಳನ್ನು ಮಾಡುವುದಿಲ್ಲ, ಇದೇ ಮೊದಲ ಬಾರಿಗೆ ಗಗನಿಯಾನಿಗಳು10 ಸೌರಫಲಕಗಳನ್ನು ಅಳವಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.