ADVERTISEMENT

ಫೋಟೊ ನೋಡಿ: ಅಡಗಿ ಕುಳಿತಿರುವ ಚಿರತೆ ಮರಿಯನ್ನು ನೀವು ಹುಡುಕಬಹುದೇ?

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 6:19 IST
Last Updated 27 ಜೂನ್ 2021, 6:19 IST
ಚಿತ್ರ ಕೃಪೆ: ಮೋಹನ್‌ ಥಾಮಸ್‌
ಚಿತ್ರ ಕೃಪೆ: ಮೋಹನ್‌ ಥಾಮಸ್‌   

ವನ್ಯಜೀವಿಗಳನ್ನು ನೋಡಲು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ! ‘ಪ್ರಕೃತಿಯ ಮಡಿಲಲ್ಲಿ ಸ್ಚಚ್ಛಂದವಾಗಿ ಜೀವಿಸುತ್ತಿರುವ ಪ್ರಾಣಿಗಳನ್ನು ನೋಡುವುದೇ ನಮಗೆ ಒಂದು ಅದೃಷ್ಟ‘ ಎಂದು ರಷ್ಯಾದ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಸರ್ಗೆ ಗೊರಾಸ್ಕೊವ್‌ ಅವರು ಹೇಳಿದ ಮಾತು ಈ ಚಿರತೆಯನ್ನು ನೋಡಿದ ಕೂಡಲೇ ನೆನಪಾಗುತ್ತದೆ.

ಕಳೆದ ಎರಡು ದಿನಗಳ ಹಿಂದೆ,ವನ್ಯಜೀವಿ ಮತ್ತು ಪ್ರಕೃತಿ ಛಾಯಾಗ್ರಾಹಕ ಮೋಹನ್ ಥಾಮಸ್ ಅವರು ತಮ್ಮ ಟ್ವಿಟರ್‌ಖಾತೆಯಲ್ಲಿ ಚಿರತೆಯ ಫೋಟೊವನ್ನು ಹಂಚಿಕೊಂಡಿದ್ದರು. ಆ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಮರದ ಕೊಂಬೆಯ ಮೇಲೆ ಚಿರತೆಯೊಂದು ಮಲಗಿರುವುದು, ಅದರ ಪಕ್ಕದಲ್ಲೇ ಮರಿ ಚಿರತೆ ಅಡಗಿ ಕುಳಿತಿರುವ ಚಿತ್ರವದು. ಅದನ್ನು ನೋಡಿದ ಕೂಡಲೇ ಒಂದು ಚಿರತೆ ಮಲಗಿರುವಂತೆ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಮರಿ ಚಿರತೆಯೊಂದು ಅಡಗಿ ಕುಳಿತಿರುವುದು ಕಾಣುತ್ತದೆ.

ADVERTISEMENT

ಈ ಚಿತ್ರವನ್ನು ಹಂಚಿಕೊಂಡಿರುವಮೋಹನ್ ಥಾಮಸ್ ‘ಈ ಚಿತ್ರದಲ್ಲಿಮರಿಚಿರತೆಯೊಂದು ಅಡಗಿ ಕುಳಿತಿದೆ, ಅದನ್ನು ನೀವು ಹುಡುಕಬಹುದೇ?‘ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.