ADVERTISEMENT

ಕೋಟ್ಯಂತರ ಡೋಸ್‌ಗಳಿಗೆ ಒತ್ತಡ, ಗುರಿತಪ್ಪಿದ ಕ್ಯೂರ್‌ವ್ಯಾಕ್‌ ಲಸಿಕೆ ಸಂಶೋಧನೆ!

ರಾಯಿಟರ್ಸ್
Published 17 ಜೂನ್ 2021, 9:09 IST
Last Updated 17 ಜೂನ್ 2021, 9:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರ್ಲಿನ್‌: ಕೋವಿಡ್‌-19 ವಿರುದ್ಧದ ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದ ಜರ್ಮನ್‌ನ ಬಯೋಟೆಕ್‌ ಕ್ಯೂರ್‌ವ್ಯಾಕ್‌ ಅಂತಿಮ ಪರೀಕ್ಷೆಯಲ್ಲಿ ವಿಫಲಗೊಂಡಿರುವುದಾಗಿ ಘೋಷಿಸಿದೆ. ಲಸಿಕೆಯು ಕೇವಲ ಶೇಕಡಾ 47ರಷ್ಟು ಮಾತ್ರ ಫಲಕಾರಿಯಾಗಿದೆ ಎಂದು ಬುಧವಾರ ಕ್ಯೂರ್‌ವ್ಯಾಕ್‌ ತಿಳಿಸಿದೆ.

ಯುರೋಪ್‌ನ ಒಕ್ಕೂಟದ ರಾಷ್ಟ್ರಗಳಿಗೆ ಕೋಟ್ಯಂತರ ಡೋಸ್‌ಗಳನ್ನು ಪೂರೈಸುವ ಒತ್ತಡದಲ್ಲಿ ಕೆಲಸ ಮಾಡುವ ಸಂದರ್ಭ, ಸಂಶೋಧನೆಯ ಪ್ರಮುಖ ಗುರಿ ತಪ್ಪಿತು ಮತ್ತು ಅಷ್ಟು ಪ್ರಮಾಣದ ಡೋಸ್‌ಗಳನ್ನು ಪೂರೈಸುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತವಾಯಿತುಎಂದು ಕ್ಯೂರ್‌ವ್ಯಾಕ್‌ ವಿಷಾಧ ವ್ಯಕ್ತಪಡಿಸಿದೆ.

ಕೋವಿನ್‌ಕೋವ್‌(CVnCoV) ಎಂದು ಹೆಸರಿಸಲಾಗಿದ್ದ ಲಸಿಕೆ ಅಭಿವೃದ್ಧಿಗೆ 134 ಕೋವಿಡ್‌-19 ಸೋಂಕಿನ ಪ್ರಕರಣಗಳ ಮೇಲೆ ಅಧ್ಯಯನ ನಡೆಸಲಾಗಿತ್ತು. ಯುರೋಪ್‌ ಮತ್ತು ಲಾಟಿನ್‌ ಅಮೆರಿಕದಿಂದ ಸುಮಾರು 40,000 ಸ್ವಯಂಸೇವಕರು ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಅಧ್ಯಯನ ನಡೆಸಿದ ಕೋವಿಡ್‌ ಪ್ರಕರಣಗಳ ಪೈಕಿ 124 ಪ್ರಕರಣಗಳು ಕೋವಿಡ್‌ ರೂಪಾಂತರಿ ಸೋಂಕಿತರು. ಒಂದು ಪ್ರಕರಣ ಕೋವಿಡ್-19 ಮೂಲ ಚೀನಾದ ವುಹಾನ್‌ನಲ್ಲಿ ಪತ್ತೆಯಾದ ಸಾರ್ಸ್‌-ಕೋವ್‌-2 ಸೋಂಕಿತ ರೋಗಿಯ ಮೇಲೆ ಅಧ್ಯಯನ ನಡೆಸಲಾಗಿತ್ತು. ಶೇಕಡಾ 57ರಷ್ಟು ಕೋವಿಡ್‌ ಪ್ರಕರಣಗಳಲ್ಲಿ ರೂಪಾಂತರಿ ಸೋಂಕು ಹೆಚ್ಚಿರುವ ಕಾರಣ ಅಧ್ಯಯನವನ್ನು ರೂಪಾಂತರಿ ಕೊರೊನಾ ಸೋಂಕಿತರ ಮೇಲೆ ನಡೆಸಲಾಗಿದೆ ಎಂದು ಕ್ಯೂರ್‌ವ್ಯಾಕ್‌ ಹೇಳಿದೆ.

ನವೆಂಬರ್‌ ವೇಳೆಗೆ 40.5 ಕೋಟಿ ಡೋಸ್‌ಗಳನ್ನು ಪೂರೈಸುವಂತೆ ಯುರೋಪಿಯನ್‌ ಒಕ್ಕೂಟದಿಂದ ಕ್ಯೂರ್‌ವ್ಯಾಕ್‌ಗೆ ಒತ್ತಡ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.