ADVERTISEMENT

ಉಪ ಸಚಿವರ ನೇಮಕ: ಮಹಿಳೆಯರಿಲ್ಲದ ತಾಲಿಬಾನ್‌ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 8:33 IST
Last Updated 21 ಸೆಪ್ಟೆಂಬರ್ 2021, 8:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾಬೂಲ್‌: ಅಫ್ಗಾನಿಸ್ತಾನದಲ್ಲಿನ ತಾಲಿಬಾನ್‌ ಸರ್ಕಾರ ಮಂಗಳವಾರ ಉಪ ಸಚಿವರುಗಳ ಹೆಸರು ಪ್ರಕಟಿಸಿದೆ. ಆದರೆ ಇದರಲ್ಲೂ ಮಹಿಳೆಯರ ಹೆಸರು ಇಲ್ಲ.

ಈ ತಿಂಗಳ ಆರಂಭದಲ್ಲಿ ಸರ್ಕಾರವು ಪುರುಷರನ್ನು ಮಾತ್ರ ಒಳಗೊಂಡ ಸಚಿವ ಸಂಪುಟ ರಚಿಸಿದಾಗ ಮಹಿಳೆಯರಿಗೂ ಸ್ಥಾನ ನೀಡಬೇಕು ಎಂಬ ಕೂಗು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬಂದಿತ್ತು.

ಕಾಬೂಲ್‌ನಲ್ಲಿ ನಡೆಯಲಿರುವ ಹೊಸ ಸಮಾವೇಶದಲ್ಲಿ ಸರ್ಕಾರದ ವಕ್ತಾರ ಜಬೀಹುಲ್ಲಾ ಮುಜಾಹಿದ್‌ ಅವರು ಮೂವರ ಹೆಸರಿನ ಪಟ್ಟಿ ಮಂಡಿಸಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.