ADVERTISEMENT

ಚಾಮರಾಜನಗರ: ಸೂಲಿಬೆಲೆ ಭಾಷಣ ಅರ್ಧಕ್ಕೆ ಮೊಟಕು

ಅನುಮತಿ ಪಡೆದಿರುವ ಅವಧಿ ಮುಕ್ತಾಯ; ಚುನಾವಣಾಧಿಕಾರಿಗಳ ಮಧ್ಯಪ್ರವೇಶ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 4:13 IST
Last Updated 24 ಏಪ್ರಿಲ್ 2024, 4:13 IST
ನಮೋ ಭಾರತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕೆಲಹೊತ್ತು ಗೊಂದಲ ಸೃಷ್ಟಿಯಾಯಿತು
ನಮೋ ಭಾರತ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಕೆಲಹೊತ್ತು ಗೊಂದಲ ಸೃಷ್ಟಿಯಾಯಿತು   

ಚಾಮರಾಜನಗರ: ನಗರದಲ್ಲಿ ಬುಧವಾರ ರಾತ್ರಿ ನಮೋ ಬ್ರಿಗೇಡ್‌ ಹಮ್ಮಿಕೊಂಡಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬೇಕಾಯಿತು. 

ನಗರದ ರಥಬೀದಿಯ ಗುರುನಂಜಪ್ಪನವರ ಛತ್ರದ ಮುಂಭಾಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಅವಕಾಶ ನೀಡಲಾಗಿತ್ತು.

ಆದರೆ, ಕಾರ್ಯಕ್ರಮ ವಿಳಂಬವಾಗಿದ್ದರಿಂದ, ಎಂಟು ಗಂಟೆಯ ನಂತರ ವೇಳೆಗೆ ವೇದಿಕೆ ಏರಿದ ಚುನಾವಣಾ ಅಧಿಕಾರಿಗಳು ಮಾತು ನಿಲ್ಲಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಸ್ವಲ್ಪ ಹೊತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. 

ADVERTISEMENT

ಮಂಗಳವಾರ ಹುಣ್ಣಿಮೆಯ ಅಂಗವಾಗಿ ಶ್ರೀಚಾಮರಾಜೇಶ್ವರಸ್ವಾಮಿ ಹುಣ್ಣಿಮೆ ರಥೋತ್ಸವ ನಡೆಯುತ್ತಿದ್ದುದರಿಂದ ಕಾರ್ಯಕ್ರಮ ಆರಂಭವಾಗುವಾಗ ತಡವಾಯಿತು ಎಂದು ಸಂಘಟಕರು ಮಾಹಿತಿ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.