ADVERTISEMENT

ಕೈತೋಟ ಹೀಗಿರಲಿ

ಎಣಿಕೆ ಗಳಿಕೆ-32

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2016, 19:30 IST
Last Updated 19 ಡಿಸೆಂಬರ್ 2016, 19:30 IST
ಕೈತೋಟ  ಹೀಗಿರಲಿ
ಕೈತೋಟ ಹೀಗಿರಲಿ   

ಮನೆಯಂಗಳದಲ್ಲಿ ಒಂದಿಷ್ಟು ಜಾಗವಿದ್ದರೆ ಅಲ್ಲಿ ಕೈತೋಟ ಮಾಡಿಕೊಳ್ಳುವುದು ಒಳಿತು. ದಿನನಿತ್ಯಕ್ಕೆ ಅಗತ್ಯ ಇರುವ ಒಂದಿಷ್ಟು ತರಕಾರಿಗಳನ್ನು ಬೆಳೆದುಕೊಳ್ಳಬಹುದು. ಅದಕ್ಕಾಗಿ ಒಂದಿಷ್ಟು ಟಿಪ್ಸ್‌ ಇಲ್ಲಿ...

* ಕೈತೋಟ ಹೀಗಿರಲಿ
ಕೈತೋಟದ ಆಕಾರಕ್ಕೆ ನಿರ್ದಿಷ್ಟ ಮಾದರಿ ಇಲ್ಲ. ಸಾಧ್ಯವಾದರೆ ಆಯತಾಕಾರ ಇರುವಂತೆ ನೋಡಿಕೊಳ್ಳಿ. ಸರಣಿ ಬೆಳೆ ಮತ್ತು ಅಂತರ ಬೆಳೆಗಳಿಂದ ಐದು ಸೆಂಟು ಜಾಗದಲ್ಲಿ 4-5 ಸದಸ್ಯರು ಇರುವ ಕುಟುಂಬಕ್ಕೆ ಸಾಕಾಗುವಷ್ಟು ತರಕಾರಿ ಬೆಳೆಯಬಹುದು.

ಭೂಮಿಯ ಸಿದ್ಧತೆ: ಮೊದಲು ಗುದ್ದಲಿಯಿಂದ 30-40 ಸೆಂಟಿ ಮೀಟರ್‌ ಆಳ ಅಗೆಯಿರಿ. ಕಲ್ಲುಗಳು, ಪೊದೆಗಳು ಮತ್ತು ಕಳೆಗಳನ್ನು ತೆಗೆದು ಹಾಕಿ. 100ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಗೊಬ್ಬರ ಹಾಕಿ. ಮಣ್ಣಿನೊಡನೆ ಚೆನ್ನಾಗಿ ಬೆರೆಸಿ. ಮುರಿ ಮತ್ತು ಸಾಲುಗಳನ್ನು 45 ಸೆಂ.ಮಿ. ಅಥವಾ 60 ಸೆಂ.ಮೀ. ಅಂತರದಲ್ಲಿ ಅಗತ್ಯಕ್ಕೆ ತಕ್ಕಂತೆ ಮಾಡಿ.

* ಬಿತ್ತನೆ ಮತ್ತು ನಾಟಿ
ನೇರ ಬೀಜ ಬಿತ್ತಿ ಬೆಳೆಯಬಹುದಾದ ಬೆಂಡೆ , ಕ್ಲಸ್ಟರ್ ಬೀನ್ಸ್‌, ಅವರೆ ಬೆಳೆಯುವುದಿದ್ದರೆ ಮುರಿಯ ಒಂದು ಭಾಗದಲ್ಲಿ 50 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಸಣ್ಣ ಈರುಳ್ಳಿ, ಶುಂಠಿ, ಕೊತ್ತಂಬರಿ ಬೆಳೆಯುವುದಿದ್ದರೆ ಮಡಿಯ ಬದುವಿನ ಪಕ್ಕದಲ್ಲಿ ಹಾಕಬಹುದು.

ನಾಟಿ ಮಾಡುವ ಬೆಳೆಗಳಾದ ಟೊಮೆಟೊ, ಬದನೆ ಮತ್ತು ಮೆಣಸಿನ ಕಾಯಿಗಳನ್ನು ಸಸಿ ಮಡಿಗಳಲ್ಲಿ ಇಲ್ಲವೇ ಕುಂಡಗಳಲ್ಲಿ ಒಂದು ತಿಂಗಳ ಮುಂಚಿತವಾಗಿ ಮೊದಲು ಬೆಳೆಯುವರು. ಬಿತ್ತಿದ ನಂತರ ಮೇಲೆ ಮಣ್ಣು ಹಾಕಿ ಅದರ ಮೇಲೆ 250ಗ್ರಾಂ ಬೇವಿನ ಹಿಂಡಿಯ ದೂಳು ಹಾಕಬೇಕು. ಇದರಿಂದ ಬೀಜಗಳನ್ನು ಇರುವೆಗಳು ತಿನ್ನುವುದಿಲ್ಲ.

ಈರುಳ್ಳಿಗೆ ಎರಡು ಕಡೆ ಅಂತರವಿರಬೇಕು. ನಾಟಿ ಮಾಡಿದ ತಕ್ಷಣ ಮತ್ತು ಮೂರನೆ ದಿನ ನೀರು ಹಾಯಿಸಬೇಕು. ಸಸಿಗಳಿಗೆ ಮೊದಲಲ್ಲಿ ಎರಡು ದಿನಕ್ಕೆ ಒಮ್ಮೆ ಮತ್ತು ನಂತರ ನಾಲ್ಕು  ದಿನಕ್ಕೆ ಒಮ್ಮೆ ನೀರು ಹಾಯಿಸಬೇಕು.

ಟೊಮೆಟೊಗೆ 30 ದಿನಗಳ ನಂತರ, ಬದನೆ ಮತ್ತು ಮೆಣಸಿನ ಕಾಯಿಗೆ 40-45ದಿನಗಳ ನಂತರ ಸಸಿ ಮಡಿಯಿಂದ ತೆಗೆದು ನಾಟಿ ಮಾಡಲಾಗುವುದು. ಟೊಮೆಟೊ ಅನ್ನು 30-45ಸೆ.ಮೀ. ಅಂತರದಲ್ಲಿ ಬದನೆ ಮತ್ತು ಮೆಣಸಿನಕಾಯಿಯನ್ನು 10ಸೆಂ.ಮೀ ಅಂತರದಲ್ಲಿ ನಾಟಿ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT