ADVERTISEMENT

ರಾಗಿ ಸಂಸ್ಕೃತಿಯ ಸಮಗ್ರ ಚಿತ್ರಣ

​ಪ್ರಜಾವಾಣಿ ವಾರ್ತೆ
Published 8 ಮೇ 2017, 19:30 IST
Last Updated 8 ಮೇ 2017, 19:30 IST
ರಾಗಿ ಸಂಸ್ಕೃತಿಯ ಸಮಗ್ರ ಚಿತ್ರಣ
ರಾಗಿ ಸಂಸ್ಕೃತಿಯ ಸಮಗ್ರ ಚಿತ್ರಣ   

‘ಬೇಕು ಅಂದ್ರೆ ಒಳ್ಳೇ ನಿದ್ದೆ, ನುಂಗ್ಬೇಕಣ್ಣ ರಾಗಿ ಮುದ್ದೆ’ ಎಂದು ಜನಪದದಿಂದ ಹೊಗಳಿಸಿಕೊಂಡ ರಾಗಿಯನ್ನು ಕನಕದಾಸರು ‘ರಾಮಧಾನ್ಯ’ ಎಂದು ಬಣ್ಣಿಸಿದ್ದಾರೆ. ಅಂತಹ ರಾಗಿ ಧಾನ್ಯದ ಬಿತ್ತನೆಯಿಂದ ಬಳಕೆವರೆಗಿನ ಸಮಗ್ರ ಆಯಾಮಗಳ ಕುರಿತು ಪರಿಚಯಿಸಲು ‘ಸಹಜ ಸಮೃದ್ಧ’ ಬಳಗ ಹೊರತಂದ ಅಂದದ ಪುಸ್ತಕವೇ (ಲೇಖಕ: ಜಿ.ಕೃಷ್ಣಪ್ರಸಾದ್‌) ‘ರಾಗಿ ತಿಂದವರು ನಿರೋಗಿ’.

ಈಗೀಗ ಹೋಟೆಲ್‌ಗಳಲ್ಲೂ ರಾಗಿಯ ತರಹೇವಾರಿ ತಿಂಡಿಗಳು ಸಿಗುತ್ತಿವೆ. ಅಕ್ಕಿ ಹಾಗೂ ಗೋಧಿಗಿಂತ ಹತ್ತುಪಟ್ಟು ಅಧಿಕ ಕ್ಯಾಲ್ಸಿಯಂ ರಾಗಿಯಲ್ಲಿದೆ. ಕಬ್ಬಿಣದ ಅಂಶವೂ ಇದರಲ್ಲಿ ಹೇರಳವಾಗಿದೆ. ಮಧುಮೇಹಿಗಳಂತೂ ತಪ್ಪದೇ ಸೇವಿಸಬೇಕಾದ ಸಿರಿಧಾನ್ಯ ಇದು. ರಾಗಿಮುದ್ದೆ ಆಹಾರ ಮಾತ್ರವಲ್ಲ; ಸಾಂಪ್ರದಾಯಿಕ ಅಡುಗೆ ಸಂಸ್ಕೃತಿಯ ಪ್ರತೀಕವೂ ಹೌದು. ಲೇಖಕರು ಪುಟ–ಪುಟದಲ್ಲೂ ಈ ಸಂಸ್ಕೃತಿಯನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

ರಾಗಿ ಮತ್ತೆ ಮುಖ್ಯವಾಹಿನಿಗೆ ಬಂದ ಬಗೆಯನ್ನು ಆರಂಭದಲ್ಲಿ ವಿವರಿಸಲಾಗಿದ್ದು, ಬಿತ್ತನೆಗೆ ಮಾಡಿಕೊಳ್ಳುವ ಸಿದ್ಧತೆಯಿಂದ ರಾಗಿಯ ರುಚಿ ರುಚಿ ಆಹಾರ ಪದಾರ್ಥ ಸಿದ್ಧಪಡಿಸುವವರೆಗೆ 13 ಅಧ್ಯಾಯಗಳಲ್ಲಿ ಮಾಹಿತಿ ಹರಡಿಕೊಂಡಿದೆ. ಒಂದೊಂದು ಅಧ್ಯಾಯವನ್ನು ಲೇಖಕರು ಒಂದೊಂದು ತೆನೆ ಎಂದು ಕರೆದಿದ್ದಾರೆ.

ಸಾಗುವಳಿ ಸಡಗರ, ಬರಿಗಾಲ ವಿಜ್ಞಾನಿಗಳ ಪ್ರಯೋಗ, ರಾಗಿಯ ಬಗೆಬಗೆ ಉಪಯೋಗ ಹಾಗೂ ರಾಗಿ ಬೆಳೆದ ರೈತರ ಸಂಪರ್ಕದ ಮಾಹಿತಿ ಒದಗಿಸಿರುವುದು ಪುಸ್ತಕದ ಉಪಯುಕ್ತತೆಯನ್ನು ಹೆಚ್ಚಿಸಿದೆ.

‘ರಾಗಿ ತಿಂದವರು ನಿರೋಗಿ’
ಲೇಖಕ: ಜಿ.ಕೃಷ್ಣಪ್ರಸಾದ್‌, ಪುಟಗಳು: 72,
ಬೆಲೆ: ₹ 100 (ಅಂಚೆ ವೆಚ್ಚ ಸೇರಿ)
ಪ್ರಕಾಶಕರು: ಸಹಜ ಸಮೃದ್ಧ, ನಂ.7, ‘ನಂದನ’
2ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, ಸುಲ್ತಾನಪಾಳ್ಯ
ಬೆಂಗಳೂರು–560032, ದೂರವಾಣಿ: 080 23655302

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.