ADVERTISEMENT

ಸಿರಿಧಾನ್ಯ ಕ್ಯಾಲೆಂಡರ್

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 19:30 IST
Last Updated 9 ಜನವರಿ 2017, 19:30 IST
ಸಿರಿಧಾನ್ಯ ಕ್ಯಾಲೆಂಡರ್
ಸಿರಿಧಾನ್ಯ ಕ್ಯಾಲೆಂಡರ್   

ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸಿರಿಧಾನ್ಯಕ್ಕೆ ಬಹಳ ಮಹತ್ವ ಸಿಗುತ್ತಿದೆ. ಸಿರಿಧಾನ್ಯಗಳಿಂದ ವಿವಿಧ ಬಗೆಯ ಆಹಾರ ತಯಾರಿಕೆ ಸಾಕಷ್ಟು ಮಂದಿಗೆ ಅಪರಿಚಿತ.

ಈ ಹಿನ್ನೆಲೆಯಲ್ಲಿ ‘ಸಹಜ ಸಮೃದ್ಧ ಬಳಗ’ವು ಹೈದರಾಬಾದಿನ ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆ ಸಹಯೋಗದೊಂದಿಗೆ ಈ ವರ್ಷದ ವರ್ಣರಂಜಿತ ಸಿರಿಧಾನ್ಯ ಕ್ಯಾಲೆಂಡರ್ ಪ್ರಕಟಿಸಿದೆ.

ಕೊರಲೆ, ಊದಲು, ರಾಗಿ, ಬರಗು, ಜೋಳ, ಸಜ್ಜೆ, ನವಣೆ, ಸಾಮೆ, ಊದಲು ಜತೆಗೆ ಮಿಶ್ರ ಸಿರಿಧಾನ್ಯಗಳನ್ನು ಬಳಸಿ ತಯಾರಿಸಬಹುದಾದ ತರಹೇವಾರಿ ರುಚಿಕರ ತಿನಿಸುಗಳ ಪಾಕ ವಿಧಾನ ಇದರಲ್ಲಿದೆ. ಮೊಳಕೆ ಕಾಳುಗಳಿಂದ ಮಾಡುವ ತಿಂಡಿಗಳ ವಿವರ ಕೂಡ ಇದೆ. ಒಟ್ಟು 24 ಪುಟಗಳ ಕ್ಯಾಲೆಂಡರ್‌ನಲ್ಲಿ ಪ್ರತಿಯೊಂದು ಸಿರಿಧಾನ್ಯದ ವಿವರ ಹಾಗೂ ಅವುಗಳಿಂದ ಮಾಡುವ ಪಾಕ ವಿಧಾನ ಕೊಡಲಾಗಿದೆ. ಬೆಲೆ: ರೂ 150 (ಅಂಚೆ ವೆಚ್ಚ ಸೇರಿ).

ಸಂಪರ್ಕಿಸುವ ವಿಳಾಸ: ಸಹಜ ಸಮೃದ್ಧ, ನಂ. 38, ಮೊದಲ ಮಹಡಿ, 1ನೇ ಕ್ರಾಸ್, ಆದಿ ಪಂಪ ರಸ್ತೆ, ವಿ.ವಿ. ಮೊಹಲ್ಲಾ, ಮೈಸೂರು-570002. ದೂರವಾಣಿ: 9535149520.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.