ADVERTISEMENT

ಅತಿ ದೊಡ್ಡ ಬಂದರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2017, 19:30 IST
Last Updated 25 ಫೆಬ್ರುವರಿ 2017, 19:30 IST
ಅತಿ ದೊಡ್ಡ ಬಂದರು
ಅತಿ ದೊಡ್ಡ ಬಂದರು   
ಅತಿ ದೊಡ್ಡ ಬಂದರು
ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಸುಂದರವಾದ ಸ್ವಾಭಾವಿಕ ಬಂದರು ಸಿಡ್ನಿಯದ್ದು. 240 ಕಿ.ಮೀ. ಉದ್ದದ ಬಂದರು ಇದು. ಸಿಡ್ನಿ ಗೋಪುರದ ಎಲಿವೇಟರ್ ಹತ್ತಿದರೆ ಸಿಡ್ನಿ ನಗರದ ಪಕ್ಷಿನೋಟ ಕಾಣುತ್ತದೆ. ಸಿಡ್ನಿಯ ಒಪೆರಾ ಹೌಸ್, ಸೇತುವೆ, ರಾಷ್ಟ್ರೀಯ ಉದ್ಯಾನ ಎಲ್ಲವನ್ನೂ ಕಣ್ತುಂಬಿಕೊಳ್ಳಬಹುದು. ಆಸ್ಟ್ರೇಲಿಯಾದ ಅತಿ ದೊಡ್ಡ ಮಾನವ ನಿರ್ಮಿತ ರಚನೆ ಸಿಡ್ನಿ ಗೋಪುರ ಎನ್ನುವುದು ಇನ್ನೊಂದು ವಿಶೇಷ.
 
ವಿಲಕ್ಷಣ ಪ್ಲಾಟಿಪಸ್
ಆಸ್ಟ್ರೇಲಿಯಾದ ಪ್ರಾಣಿ ಪ್ಲಾಟಿಪಸ್ ವಿಲಕ್ಷಣವಾಗಿದೆ. ಇಂಗ್ಲೆಂಡ್‌ನ ಪ್ರಕೃತಿಜೀವಿ ತಜ್ಞರು 18ನೇ ಶತಮಾನದಲ್ಲಿ ಮೊದಲು ಇದನ್ನು ಅಧ್ಯಯನ ಮಾಡಿದರು. ಇಲಿಯ ದೇಹಕ್ಕೆ ಬಾತುಕೋಳಿಯ ಕಾಲು, ಕೊಕ್ಕನ್ನು ಸಿಕ್ಕಿಸಿದಂತಿದೆ ಎಂದು ಅವರು ತಮಾಷೆ ಮಾಡಿದ್ದರು.
 

ಅರ್ಜೆಂಟಿನಾದ ಸ್ಯಾಂಟಿಯಾಗೊ ಲ್ಯಾಂಜ್ ಕ್ಯಾನ್ಸರ್‌ನಿಂದ ಪಾರಾದ 54 ವರ್ಷದ ಗಟ್ಟಿಗ. ಕಳೆದ ವರ್ಷ ಆಗಸ್ಟ್ 16ರಂದು ರಿಯೊ ಒಲಿಂಪಿಕ್ಸ್‌ನ ಸೇಲಿಂಗ್‌ನಲ್ಲಿ ಅವರು ಚಿನ್ನದ ಪದಕ ಗೆದ್ದರು. ಆರು ಸಲ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿರುವ ಅವರು ಕಳೆದ ವರ್ಷ ಪದಕ ಪಡೆದವರಲ್ಲಿಯೇ ಅತಿ ಹಿರಿಯ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.