ADVERTISEMENT

ಆಟಕೆ ಬಾ ಅಮ್ಮಾ...

ಮಕ್ಕಳ ಪದ್ಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2017, 6:07 IST
Last Updated 19 ಮಾರ್ಚ್ 2017, 6:07 IST
ಚಿತ್ರ: ಶ್ರೀಕಂಠಮೂರ್ತಿ
ಚಿತ್ರ: ಶ್ರೀಕಂಠಮೂರ್ತಿ   

ಫೇಸ್ಬುಕ್ಕನ್ನು ಮುಚ್ಚಿಟ್ಟು

ವಾಟ್ಸಾಪನ್ನು ಬಿಟ್ಬಿಟ್ಟು

ಟೀವಿ ಬಂದ್ ಮಾಡ್ಬಿಟ್ಟು

ADVERTISEMENT

ಆಟಕೆ ಬಾ ಅಮ್ಮಾ...

ಹರಟೆ ಗಿರಟೆ ಮರೆತ್ಬಿಟ್ಟು

ಅಡುಗೆ ಕೆಲಸ ಬದಿಗಿಟ್ಟು

ತಿಂಡೀನೆಲ್ಲ ಮುಚ್ಚಿಟ್ಟು

ಆಟಕೆ ಬಾ ಅಮ್ಮಾ...

ಬ್ಯಾಟು ಬಾಲು ಹಿಡ್ಕೊಂಡು

ಕ್ರಿಕೆಟ್ ಆಟ ಆಡ್ಬೇಕು

ನೀನು ಬೌಲಿಂಗ್ ಮಾಡ್ಬೇಕು

ಆಟಕೆ ಬಾ ಅಮ್ಮಾ...

ಸೈಕಲ್ ಮೇಲೆ ಏರಬೇಕು

ಅಂಗಳದಲ್ಲಿ ಸುತ್ತಬೇಕು

ನೀನೂ ಜೊತೆಗೆ ಇರಬೇಕು

ಆಟಕೆ ಬಾ ಅಮ್ಮಾ...

ನೆಪಗಿಪ ಏನೂ ಹೇಳ್ಬೇಡ

ಕೆಲಸದ ಒತ್ತಡ ಅನ್ಬೇಡ

ಸೀರಿಯಲ್ ಸಿನಿಮಾ ನೋಡ್ಬೇಡ

ಆಟಕೆ ಬಾ ಅಮ್ಮಾ...

-ಜೆಸ್ಸಿ ಪಿ.ವಿ. ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.