ADVERTISEMENT

ಎಲ್ಲಾ ಫ್ರೆಂಡ್ಸು... ಎಲ್ಲಾ ಫ್ರೆಂಡ್ಸು!

ನಿರ್ಮಲಾ ಸುರತ್ಕಲ್
Published 6 ಮೇ 2017, 19:30 IST
Last Updated 6 ಮೇ 2017, 19:30 IST
ಎಲ್ಲಾ ಫ್ರೆಂಡ್ಸು... ಎಲ್ಲಾ ಫ್ರೆಂಡ್ಸು!
ಎಲ್ಲಾ ಫ್ರೆಂಡ್ಸು... ಎಲ್ಲಾ ಫ್ರೆಂಡ್ಸು!   

ಹೂವಿನ್ಮೇಲೊಂದು ಚಿಟ್ಟೆ
ಹೂವಿಂದ್ಹೂವಿಗೆ ಹಾರುತ್ತೆ
ಪರಾಗವಂತೆ, ಹೀರುತ್ತೆ
ಕುಣಿಯುತಾನೇ ನನ್ನನು ನೋಡಿ, ‘ಬೈ ಬೈ’ ಹೇಳುತ್ತೆ!

ಮರದ್ಮೇಲಿನ ಅಳಿಲು
ಚಿಕ್ ಚಿಂವ್ ಅಂತ ಕೂಗುತ್ತೆ
ಮೇಲೆ, ಕೆಳಗೆ ಹೋಗುತ್ತೆ
ಚಿಕ್ ಚಿಕ್ ಭಾಷೆಯಲೇನೆ ನನ್ನಲ್ಲಿ, ‘ಹಲೋ’ ಹೇಳುತ್ತೆ!

ಕೊಂಬೆ ಮೇಲಿನ ಹಕ್ಕಿ
ಕಾಯಿ, ಹಣ್ಣು ಕುಕ್ಕುತ್ತೆ
ರೆಂಬೆ, ಕೊಂಬೆ ಹಾರುತ್ತೆ
ನನ್ನೇ ನೋಡ್ತಾ ಚಿಂವ್ ಚಿಂವ್, ‘ಹಾಯ್! ಹಾಯ್! ಅಂತ ಹೇಳುತ್ತೆ

ADVERTISEMENT

ದಾರೀಲೊಂದು ನಾಯಿ
ಮೂಸಿ, ಮೂಸಿ ನೋಡುತ್ತೆ
ಕುಂಯ್ ಕುಂಯ್ ಅಂತ ಹೇಳುತ್ತೆ
ಹೋಗ್ತಾ ಇದ್ರೆ ಬೆನ್ಹಿಂದೇನೇ ನಡ್ಕೊಂಡ್ಬರುತ್ತೆ!

ಗಂಗೆ ಹಸುವಿನ ಕಂದ
ಅಂಬಾ ಅಂತ ಕೂಗುತ್ತೆ
ಬಾಲ ಎತ್ತಿ ಕುಣಿಯುತ್ತೆ
ಹಸಿರು ಹುಲ್ಲು ಕೊಟ್ರೆ ಖುಷಿಯಲ್ಲಿ ತಿನ್ತಾ ನೋಡುತ್ತೆ!

ಮನೆಯೊಳಗಿಲ್ಲ ಫ್ರೆಂಡ್ಸು
ಹೊರಗಡೆ ಬಂದ್ರೆ ನೋಡಂತೆ
ಆ ಕಡೆ, ಈ ಕಡೆ ಹೋಗಂತೆ
ಎಲ್ಲಾ ಫೆಂಡ್ಸು, ಎಲ್ಲಾ ಫ್ರೆಂಡ್ಸು ಎಷ್ಟೊಂದು ಗೊತ್ತೆ!?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.