ADVERTISEMENT

ಒಂಚೂರು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 19:30 IST
Last Updated 15 ಏಪ್ರಿಲ್ 2017, 19:30 IST
ಒಂಚೂರು
ಒಂಚೂರು   

ಹೇಗಿದ್ದನೋ ಅಶೋಕ?
ಅಶೋಕ ಕಟ್ಟಿಸಿದ ಸ್ಮಾರಕಗಳು, ಇಮಾರತ್ತುಗಳ ಕುರಿತು ಈಗಲೂ ಚರ್ಚೆಗಳು ನಡೆಯುತ್ತಿವೆ. ಅಶೋಕ ರಾಜನ ಬಗೆಗೆ ಏನೆಲ್ಲಾ ವಿಷಯಗಳನ್ನು ಓದುತ್ತೇವೆ. ಆದರೆ, ಈಗಲೂ ಅವನು ನೋಡಲು ಹೇಗಿದ್ದ ಎನ್ನುವುದು ಯಾರಿಗೂ ತಿಳಿದಿಲ್ಲ.

**

ವಿಲಿಯಂ ಚೆಸ್ಟರ್ ಕಾಣ್ಕೆ
ಆಕ್ಸ್‌ಫರ್ಡ್‌ ಪದಕೋಶಕ್ಕೆ ಅಮೆರಿಕದ ಸೇನಾ ಶಸ್ತ್ರವೈದ್ಯ ವಿಲಿಯಂ ಚೆಸ್ಟರ್‌ ಮೈನರ್‌ ನೀಡಿರುವ ಕೊಡುಗೆ ಶ್ಲಾಘನೀಯ. ಕೊಲೆ ಆಪಾದನೆಯ ಮೇಲೆ ಶಿಕ್ಷೆ ಅನುಭವಿಸಿದಾಗ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡರು. ಆ ಸ್ಥಿತಿಯಲ್ಲಿಯೂ ಅವರಿಗೆ ಕೆಲವು ಪದಗಳು ನೆನಪಾಗುತ್ತಿದ್ದವು.

ADVERTISEMENT

**

ತರಕಾರಿ ವಾದ್ಯಗೋಷ್ಠಿ
ವಿಯೆನ್ನಾದ ತರಕಾರಿ ವಾದ್ಯಗೋಷ್ಠಿ 1998ರಲ್ಲಿ ಪ್ರಾರಂಭವಾಯಿತು. ಬದನೆಕಾಯಿಗಳನ್ನು ‘ಚಿಟಿಕೆ’ಗಳಾಗಿಸಲಾಯಿತು. ಕುಂಬಳಕಾಯಿ ‘ಬಾಸ್’ ಆಯಿತು. ಸೌತೇಕಾಯಿಯು ‘ಕುಕುಫೋನ್’ ಆದದ್ದು ಮೋಡಿಯೇ. ಅದನ್ನು ಸ್ಯಾಕ್ಸೊಫೋನ್‌ನ ಸಹೋದರ ಎನ್ನಬಹುದು. ಕ್ಯಾರೆಟ್‌ಗಳು ಕೊಳಲುಗಳಾದವು. ಟರ್ನಿಪ್ ಗೆಡ್ಡೆಯು ‘ಬೊಂಗೋಸ್’ ಆಗಿ ಪರಿವರ್ತಿತವಾಯಿತು.

ಹನ್ನೊಂದು ಸಂಗೀತಗಾರರು ತರಕಾರಿಗಳನ್ನೇ ಬಗೆಬಗೆಯ ವಾದ್ಯಗಳಾಗಿಸಿ, ಗೋಷ್ಠಿ ನಡೆಸಿಕೊಡುತ್ತಿದ್ದರು. ಕಾರ್ಯಕ್ರಮದ ಹಿಂದಿನ ದಿನವೇ ಈ ವಾದ್ಯಗಳನ್ನು ತಯಾರು ಮಾಡುತ್ತಿದ್ದರು. ತಾಜಾ ತರಕಾರಿಯಿಂದ ನಾದ ಹಸನಾಗಿ ಬರುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದರು.

**

ಪರ್ವತದ ಮೇಲೆ ಪಿಯಾನೊ
2006ರಲ್ಲಿ ಚಿಂದಿ ಆಯುವ ಕೆಲವರು ಬ್ರಿಟನ್‌ನ ಎತ್ತರದ ಪರ್ವತ ಬೆನ್ ನೆವಿಸ್ ಅನ್ನು ಹತ್ತಿದರು. ಅದರ ಮೇಲೆ ಅವರಿಗೆ ಪಿಯಾನೊ ಸಿಕ್ಕಿತು. 35 ವರ್ಷಗಳ ಹಿಂದೆ ಮರ ಕಡಿಯುವ ವೃತ್ತಿ ಮಾಡುತ್ತಿದ್ದ ಕೆನ್ನಿ ಕ್ಯಾಂಪ್್ಬೆಲ್ ಎಂಬಾತ ಆ ಪಿಯಾನೊವನ್ನು ಅಲ್ಲಿಗೆ ಸಾಗಿಸಿದ್ದ. ಅದು ಅವನಿಗೆ ದಾನದ ರೂಪದಲ್ಲಿ ಸಿಕ್ಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.