ADVERTISEMENT

ಕುಂಭಕರ್ಣ

​ಪ್ರಜಾವಾಣಿ ವಾರ್ತೆ
Published 26 ಮೇ 2018, 19:30 IST
Last Updated 26 ಮೇ 2018, 19:30 IST
ಕುಂಭಕರ್ಣ
ಕುಂಭಕರ್ಣ   

ರಾವಣನ ಸಹೋದರ ಕುಂಭಕರ್ಣ. ಇವನಿಗೆ ಬ್ರಹ್ಮ ಬಹಳ ವಿಚಿತ್ರವಾದ ಒಂದು ವರ ಕೊಟ್ಟ. ಈ ವರ ಪಡೆದ ಕುಂಭಕರ್ಣ ವರ್ಷದ ಆರು ತಿಂಗಳ ಕಾಲ ನಿರಂತರವಾಗಿ ನಿದ್ರೆ ಮಾಡಬಲ್ಲ. ಅವನನ್ನು ಒತ್ತಾಯದಿಂದ ಎಬ್ಬಿಸಿದ ರಾವಣ, ರಾಮನ ವಿರುದ್ಧ ಹೋರಾಟ ನಡೆಸುವಂತೆ ಮಾಡುತ್ತಾನೆ. ರಾಮನ ಬಾಣಗಳಿಗೆ ಶರಣಾಗುವ ಮೊದಲು ಕುಂಭಕರ್ಣ ಯಾರ ಎದುರೂ ಸೋತಿರಲಿಲ್ಲ.

ಜೇನು ನೊಣಗಳ ಹಿಂಡು

ವೇಲ್ಸ್‌ನ ಮಹಿಳೆಯೊಬ್ಬರಿಗೆ ಒಮ್ಮೆ ಅಚ್ಚರಿ ಕಾದಿತ್ತು. ಅವರ ಕಾರಿನ ಹಿಂಬದಿಯ ಗಾಜಿನ ಮೇಲೆ ಅಂದಾಜು ಇಪ್ಪತ್ತು ಸಾವಿರ ಜೇನು ನೊಣಗಳು ಮುತ್ತಿಕೊಂಡಿದ್ದವು. ಅವು ಎರಡು ದಿನಗಳ ಕಾಲ ಕಾರಿನ ಗಾಜಿನ ಮೇಲೆಯೇ ಇದ್ದವು. ಕಾರಿನ ಹಿಂಬದಿಯ ಗಾಜಿನ ವೈಪರ್‌ಗೆ ರಾಣಿ ಜೇನು ನೊಣ ಸಿಲುಕಿಕೊಂಡಿತ್ತು. ಹಾಗಾಗಿ, ಇನ್ನುಳಿದ ಜೇನು ನೊಣಗಳು ರಾಣಿಯನ್ನು ಬಿಟ್ಟುಹೋಗಲು ಸಿದ್ಧವಿರಲಿಲ್ಲ. ರಾಣಿಯನ್ನು ಅಲ್ಲಿಂದ ಬಿಡಿಸಿದ ನಂತರವಷ್ಟೇ, ಇತರ ಜೇನು ನೊಣಗಳು ಕಾರಿನ ಗಾಜನ್ನು ಬಿಟ್ಟು ಬೇರೆಡೆ ಹಾರಿ ಹೋದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.