ADVERTISEMENT

ಕೆಂಪು ಮೂತಿಯ ಬುಲ್‌ಬುಲ್

ಹಕ್ಕಿ ಗೀತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2015, 19:30 IST
Last Updated 18 ಏಪ್ರಿಲ್ 2015, 19:30 IST
ಕೆಂಪು ಮೂತಿಯ ಬುಲ್‌ಬುಲ್
ಕೆಂಪು ಮೂತಿಯ ಬುಲ್‌ಬುಲ್   

ಐಯುಸಿಎನ್’ ಮಾಡಿರುವ ಅತಿ ಕೆಟ್ಟ ನೂರು ಆಕ್ರಮಣಶಾಲಿ ಹಕ್ಕಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇರುವುದು ಕೆಂಪು ಮೂತಿಯ ಬುಲ್‌ಬುಲ್. ಮೈನಾ ಹಾಗೂ ಸಣ್ಣ ಮೈನಾ ಬಿಟ್ಟರೆ ದಾಳಿಕೋರತನದಲ್ಲಿ ಇದಕ್ಕೆ ನಂತರದ ಸ್ಥಾನ. ಭಾರತವೇ ಇದರ ತವರು. ಪೆಸಿಫಿಕ್ ದ್ವೀಪಗಳಲ್ಲಿ ಇದನ್ನು ಕಂಟಕ ಎಂದು ಭಾವಿಸಿದ್ದಾರೆ.

ಗುಬ್ಬಚ್ಚಿಗಿಂತ ಗಾತ್ರದಲ್ಲಿ ದೊಡ್ಡದಾದ ಕೆಂಪು ಮೂತಿಯ ಬುಲ್‌ಬುಲ್‌ನ ಬಾಲ ಉದ್ದವಾಗಿದ್ದು, ಅಂಚಿನಲ್ಲಿ ಬಿಳಿ ತೇಪೆ ಇದೆ. ಶಿಖೆಯ ಭಾಗದಲ್ಲಿ ಸೆಟೆದು ನಿಂತ ಗರಿಗಳೇ ಇದನ್ನು ಪತ್ತೆಹಚ್ಚಲು ಸಾಕು. ಬಾಲದ ಕೆಳಭಾಗದಲ್ಲಿ ಕೆಂಪು ತೇಪೆ ಕೂಡ ಇದೆ. ಎದೆಭಾಗದಲ್ಲಿ ಕೆಲವು ಗೆರೆಗಳುಂಟು.

ಪರಾವಲಂಬಿ ಹಕ್ಕಿ ಕೋಗಿಲೆ ತನ್ನ ಮೊಟ್ಟೆಗಳನ್ನು ಕೆಂಪು ಬುಲ್‌ಬುಲ್ ಹಕ್ಕಿಯ ಗೂಡಿನಲ್ಲಿ ಇಡುವುದು ಮಾಮೂಲು; ಕೆಲವು ಕೋಗಿಲೆಗಳು ಕಾಗೆಯ ಗೂಡಿನಲ್ಲಿ ಮೊಟ್ಟೆಗಳನ್ನು ಇಡುತ್ತವಲ್ಲ ಹಾಗೆ.

ಒಂದು ಕಾಲದಲ್ಲಿ ಕೆಂಪು ಮೂತಿಯ ಬುಲ್‌ಬುಲ್ ಹಕ್ಕಿಯನ್ನು ಪಂಜರದಲ್ಲಿ ಹಿಡಿದಿಡುವುದು ಶೋಕಿಯಾಗಿತ್ತು. ಅದರ ಮೃದು ದನಿಗೆ ಮನಸೋತು ಜನ ಅದನ್ನು ಪಂಜರದಲ್ಲಿ ಇಡುತ್ತಿದ್ದರು.

ತಮಾಷೆ: ‘ಬುಲ್‌ಬುಲ್’ ಎಂದರೆ ಪರ್ಷಿಯಾ ಭಾಷೆಯಲ್ಲಿ ಕೋಗಿಲೆ ಎಂದು ಅರ್ಥ. ಭಾರತದಲ್ಲಿ ಬುಲ್‌ಬುಲ್ ತರಂಗ್ ಎಂಬ ಹೆಸರಿನ ಸಂಗೀತ ವಾದ್ಯವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.