ADVERTISEMENT

ಚಾಲಾಕಿ ಒರಾಂಗುಟನ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಚಾಲಾಕಿ ಒರಾಂಗುಟನ್
ಚಾಲಾಕಿ ಒರಾಂಗುಟನ್   

ಅಮೆರಿಕದ ಒಮಾಹಾ ಮೃಗಾಲಯದಲ್ಲಿದ್ದ ‘ಫು ಮಂಚು’ ಹೆಸರಿನ ಒರಾಂಗುಟನ್ ಪದೇ ಪದೇ ಬೋನಿನಿಂದ ಆಚೆಗೆ ಬರುತ್ತಿತ್ತು. ಮೃಗಾಲಯದ ಸಿಬ್ಬಂದಿ ಅದು ಹಾಕಿದ್ದ ಬೀಗ ತೆಗೆದುಕೊಂಡು ಅದು ಹೇಗೆ ಹೊರಬರುತ್ತಿತ್ತು ಎಂದು ತಲೆಕೆಡಿಸಿಕೊಂಡರು.

ಒಂದು ದಿನ ನಿಗಾ ಮಾಡಲಾಗಿ, ಬಾಯಿಯೊಳಗೆ ಇಟ್ಟುಕೊಂಡಿದ್ದ ಒಂದು ವೈರ್ ಹೊರತೆಗೆದು, ಅದರಿಂದ ಬೀಗ ತೆಗೆದು ಹೊರಬಂದದ್ದು ಗೊತ್ತಾಯಿತು. ಒರಾಂಗುಟನ್ ಜಾಣತನ ಕಂಡು ಅವರೆಲ್ಲ ಅವಾಕ್ಕಾದರು.

*

ADVERTISEMENT


ಕಣ್ಣುಬಿಟ್ಟೇ ನಿದ್ದೆ
ಗಿನಿಪಿಗ್‌ಗಳು ಕಣ್ಣು ಬಿಟ್ಟುಕೊಂಡೇ ಮಲಗುತ್ತವೆ. ಹೆಚ್ಚು ಸುರಕ್ಷಿತ ಎಂದು ಅನ್ನಿಸಿದರೆ ಮಾತ್ರ ಅವು ಕೆಲಕಾಲ ಕಣ್ಣು ಮುಚ್ಚುತ್ತವೆ. ಹಾಗೆ ಕಣ್ಣು ಮುಚ್ಚುವುದು ತುಂಬ ಅಪರೂಪ.

*


ಲಿಪಿಕಾರ ಸತ್ಯಜಿತ್ ರೇ
ಬಂಗಾಳಿ ಚಲನಚಿತ್ರಗಳ ದಿಗ್ಗಜ ನಿರ್ದೇಶಕ ಸತ್ಯಜಿತ್ ರೇ ಲಿಪಿಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರು. ರೋಮನ್‌ನ ನಾಲ್ಕು ಲಿಪಿಗಳನ್ನು ಅವರು ಅಭಿವೃದ್ಧಿಪಡಿಸಿದ್ದರು. ‘ರೇ ರೋಮನ್’, ‘ರೇ ಬಿಜಾರೆ’, ‘ಡಾಫ್‌ನಿಸ್‌’ ಹಾಗೂ ‘ಹಾಲಿಡೇ ಸ್ಕ್ರಿಪ್ಟ್‌’ ಎಂದು ಅವರು ಆ ಲಿಪಿಗಳನ್ನು ಹೆಸರಿಸಿದ್ದರು. 1971ರ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಮೊದಲ ಎರಡು ಲಿಪಿಗಳಿಗೆ ಪ್ರಶಸ್ತಿಯೂ ಸಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.