ADVERTISEMENT

ಚಿತ್ರಪಟ ಕಥನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 19:30 IST
Last Updated 31 ಡಿಸೆಂಬರ್ 2016, 19:30 IST
ಚಿತ್ರಪಟ ಕಥನ
ಚಿತ್ರಪಟ ಕಥನ   

ಎಂ.ಕೆ. ಇಂದಿರಾ ಜನ್ಮಶತಾಬ್ದಿ ನೆಪದಲ್ಲಿ...
ಎಂ.ಕೆ. ಇಂದಿರಾ ಕನ್ನಡದ ಜನಪ್ರಿಯ ಕಾದಂಬರಿಗಾರ್ತಿ. ‘ಗೆಜ್ಜೆಪೂಜೆ’, ‘ಸದಾನಂದ’, ‘ಫಣಿಯಮ್ಮ’, ‘ಮುಸುಕು’, ‘ಪೂರ್ವಾಪರ’, ‘ಗಿರಿಬಾಲೆ’ ಸೇರಿದಂತೆ ಇಂದಿರಾ ಅವರ ಅನೇಕ ಕಾದಂಬರಿಗಳು ಅಪಾರ ಜನಪ್ರಿಯತೆ ಗಳಿಸಿವೆ. ಪ್ರೇಮಾ ಕಾರಂತರ ನಿರ್ದೇಶನದಲ್ಲಿ ‘ಫಣಿಯಮ್ಮ’ ಚಲನಚಿತ್ರವಾಗಿ ರಾಷ್ಟ್ರಪ್ರಶಸ್ತಿ ಗಳಿಸಿದೆ. ಪುಟ್ಟಣ್ಣ ಕಣಗಾಲರ ನಿರ್ದೇಶನದ ‘ಗೆಜ್ಜೆಪೂಜೆ’ ಕನ್ನಡದ ಜನಪ್ರಿಯ ಚಿತ್ರಗಳಲ್ಲೊಂದು.

ಸಾಹಿತ್ಯ ಮತ್ತು ಸಿನಿಮಾ ಎರಡು ಮಾಧ್ಯಮಗಳ ಮೂಲಕವೂ ಸಹೃದಯರ ಗಮನಸೆಳೆದ ಇಂದಿರಾ ಅವರ ಜನ್ಮಶತಾಬ್ದಿ ಸಂದರ್ಭವಿದು. ಜನವರಿ 5ಕ್ಕೆ ಅವರು ಹುಟ್ಟಿ ನೂರು ವರ್ಷಗಳು ತುಂಬುತ್ತವೆ (ಜ. 5, 1917 – ಮಾರ್ಚ್‌ 15, 1994). ಇಂದಿರಾ ಅವರನ್ನು ನೆನಪಿಸಿಕೊಳ್ಳಲು, ಅವರ ಕೃತಿಗಳನ್ನು ಮರಳಿ ಓದಲು ನೂರರ ಈ ನೆಪ ಒಂದು ಕಾರಣವಾಗಬೇಕು. ಇಲ್ಲಿನ ಕಪ್ಪುಬಿಳುಪು ಚಿತ್ರದಲ್ಲಿ ಇಂದಿರಾ ಅವರೊಂದಿಗೆ ಕಾದಂಬರಿಗಾರ್ತಿ ಪ್ರೇಮಾ ಭಟ್‌ (ಎಡಬದಿ) ಹಾಗೂ ಅಂದಿನ ವಿಧಾನಸಭೆ ಸ್ಪೀಕರ್‌ ಕೆ.ಎಸ್‌. ನಾಗರತ್ನಮ್ಮ (ಬಲಬದಿ) ಅವರಿದ್ದಾರೆ. ಪ್ರೇಮಾ ಭಟ್‌ರ ಪುಸ್ತಕ ಬಿಡುಗಡೆಯ ಈ ಕಾರ್ಯಕ್ರಮದಲ್ಲಿ ಇಂದಿರಾ ಅವರಿಗೆ ಗೌರವ ಸಮರ್ಪಣೆಯೂ ನಡೆಯಿತು.
-ಪ್ರಜಾವಾಣಿ ಆರ್ಕೈವ್ಸ್‌ / ಟಿ.ಎಲ್‌. ರಾಮಸ್ವಾಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT