ADVERTISEMENT

ದೇಶಕೆ ಹೆಮ್ಮೆ ತರುವೆನು ಅಮ್ಮಾ...

ಹೇಮಲತಾ, ಭದ್ರಾವತಿ
Published 8 ನವೆಂಬರ್ 2014, 19:30 IST
Last Updated 8 ನವೆಂಬರ್ 2014, 19:30 IST
ಶಶಿರೇಖಾ
ಶಶಿರೇಖಾ   

ಮುದ್ದು ಮಗಳೇ... ಮುದ್ದು ಗೊಂಬೆ
ನಿನಗೊಂದು ವಿಶೇಷ ತೋರುವೆ ಚಿನ್ನಾ!!
ಅಮ್ಮ... ಅಮ್ಮ... ಬಂದೇನಮ್ಮ...
ಏನದು ವಿಶೇಷ ಹೇಳಮ್ಮ..!!
ನೋಡೆಲೆ ಪುಟ್ಟಿ... ಇವಳೇ ಮಲಾಲಾ...
ಪಾಕಿಸ್ತಾನದ ಮುದ್ದಿನ ಕೂಸು...!!
ಎಷ್ಟು ಚಂದ ಕಾಣ್ತಾಳಮ್ಮ
ಏನಿವಳ ವಿಷಯ ಹೇಳಮ್ಮ!!
ಧೈರ್ಯದ ಮಗಳು ಕೆಚ್ಚಿನ ಕಣ್ಮಣಿ
ಹೆದರದೆ ಬೆದರದೆ ಹೇಳಿದಳು:
‘ಹೆಣ್ಣು ಮಕ್ಕಳನು ಶಾಲೆಗೆ ಸೇರಿಸಿ
ಉಗ್ರವಾದವ ದೂರವೆ ನಿಲಿಸಿ’.
‘ಆಮೇಲೆ ಏನಾಯ್ತು ಹೇಳಮ್ಮ
ಕೇಳುವ ಆಸೆ ಹೆಚ್ಚಾಯ್ತಮ್ಮ!!’

‘ಆದರೆ.., ಅವಳಾಸೆ ಕೈಗೂಡುವ ಮುನ್ನ
ಉಗ್ರನೊರ್ವ ಗುಂಡಿಟ್ಟ ಪುಟ್ಟಿ!!’
‘ಅಯ್ಯೋ... ಅಮ್ಮಾ
ಇದು ಸುಳ್ಳಾಗಲಮ್ಮ!!’
‘ಹಾಗೇ ಆಯಿತು, ಸುಳ್ಳಾಯಿತು ಕಂದ.
ಮೃತ್ಯುವ ಹೋರಾಡಿ ಗೆದ್ದಳು ಚಂದ!!’
‘ನಿಜಕ್ಕೂ  ಅವಳು ಸಾಹಸಿಯಮ್ಮ
ಅವಳೇ ನನಗೆ ಸ್ಫೂರ್ತಿಯಮ್ಮಾ!!’
‘ಹೌದು ಮಗಳೇ ಪುಟ್ಟ ವಯಸ್ಸಿಗೆ
ನೊಬೆಲ್ ಪುರಸ್ಕಾರ ಗಳಿಸಿಹಳು!! 
ವಿಶ್ವ ಮಾನ್ಯತೆ ಪಡೆದಿಹಳು,
ಹೆಣ್ಣು ಮಕ್ಕಳಿಗೆ ಮಾದರಿ ಆಗಿಹಳು!!’
‘ನಾನೂ ಹೋರಾಟಗಾರ್ತಿ ಅಗುವೆನಮ್ಮ
ದೇಶಕೆ ಹೆಮ್ಮೆ ತರುವೆನು ಅಮ್ಮ!!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT