ADVERTISEMENT

ಬಂದ್‌ ನಿಮಿತ್ತಂ ಬಹುಕೃತ ವೇಷಂ!

ಚಿತ್ರಪಟ ಕಥನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2016, 19:30 IST
Last Updated 24 ಸೆಪ್ಟೆಂಬರ್ 2016, 19:30 IST
ಪ್ರಜಾವಾಣಿ ಆರ್ಕೈವ್ಸ್‌ / ಟಿ.ಎಲ್‌. ರಾಮಸ್ವಾಮಿ
ಪ್ರಜಾವಾಣಿ ಆರ್ಕೈವ್ಸ್‌ / ಟಿ.ಎಲ್‌. ರಾಮಸ್ವಾಮಿ   

ಬಂದ್‌ಗೆ ಕರೆ ನೀಡುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿನ ಪ್ರತಿಭಟನೆಯ ಮಾರ್ಗಗಳಲ್ಲೊಂದು. ಈ ಬಂದ್‌ಗಳು ಕೆಲವೊಮ್ಮೆ ಹಿಂಸಾತ್ಮಕವಾಗಿ ಪರಿಣಮಿಸಿ, ಪ್ರತಿಭಟನೆಯ ಮೂಲ ಉದ್ದೇಶವನ್ನೇ ಮರೆಮಾಚಿಬಿಡುತ್ತವೆ. ಈ ಅಹಿತಕರ ಘಟನೆಗಳನ್ನು ಹೊರತುಪಡಿಸಿದರೆ, ಬಂದ್‌ ಸಂದರ್ಭದಲ್ಲಿ ಒಂದಷ್ಟು ರಸವತ್ತಾದ ದೃಶ್ಯಗಳೂ ರೂಪುಗೊಳ್ಳುತ್ತವೆ.

ಪ್ರತಿಭಟನಾಕಾರರು ತಮ್ಮ ಸಿಟ್ಟನ್ನು ವ್ಯಕ್ತಪಡಿಸಲಿಕ್ಕೆ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿರುತ್ತಾರೆ. ಲಬೊ ಲಬೊ ಎಂದು ಬಾಯಿ ಬಡಿದುಕೊಳ್ಳುವುದು, ಧಿಕ್ಕಾರ ಕೂಗುವುದು, ಪ್ರತಿಕೃತಿ ದಹನ, ಚಪ್ಪಲಿ ಏಟು, ಶವದ ಆಕೃತಿಯ ಮೆರವಣಿಗೆ, ತಿಥಿ ಊಟ – ಹೀಗೆ ಬಂದ್‌ನಲ್ಲಿ ತೊಡಗಿಕೊಂಡವರ ಸೃಜನಶೀಲತೆ ಹಲವು ರೂಪದಲ್ಲಿ ವ್ಯಕ್ತಗೊಳ್ಳುತ್ತದೆ.

1967ರ ಜುಲೈ 19ರಂದು ನಡೆದ ಬೆಂಗಳೂರು ಬಂದ್‌ ಸಂದರ್ಭದ ಇಲ್ಲಿನ ಚಿತ್ರದಲ್ಲೂ ಅಂತಹುದೇ ರಸವತ್ತಾದ ದೃಶ್ಯವೊಂದಿದೆ. ಕನ್ನಡಪರ, ರೈತಪರ ಚಳವಳಿ–ಪ್ರದರ್ಶನಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ವಾಟಾಳ್‌ ನಾಗರಾಜ್‌ ಅವರನ್ನು ಚಿತ್ರದಲ್ಲಿ ಕಾಣಬಹುದು.ಸ್ವಾಮೀಜಿ ವೇಷದಲ್ಲಿ ಇರುವ ವಾಟಾಳರನ್ನು ಓರ್ವ ಪೊಲೀಸ್‌ ರಸ್ತೆಯಲ್ಲಿ ತಡೆದುನಿಲ್ಲಿಸಿ ವಿಚಾರಿಸುತ್ತಿದ್ದಾರೆ. ಚಿತ್ರದ ಮತ್ತೊಂದು ತುದಿಯಲ್ಲಿರುವ ಜನರ ಮೋರೆಯಲ್ಲಿನ ಮಂದಹಾಸವನ್ನು ಗಮನಿಸಿದರೆ, ಪ್ರಸಂಗದಲ್ಲಿನ ಲಘುತನವನ್ನು ಕಲ್ಪಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT