ADVERTISEMENT

ಸಹೃದಯರ ಸ್ಪಂದನ

​ಪ್ರಜಾವಾಣಿ ವಾರ್ತೆ
Published 6 ಮೇ 2017, 19:30 IST
Last Updated 6 ಮೇ 2017, 19:30 IST

ದೀಪದಂಥ ‘ದ್ವೀಪ’
‘ದ್ವೀಪ ಕಟ್ಟಿದ ಬಗೆ’ – ಗಿರೀಶ ಕಾಸರವಳ್ಳಿ ಅವರ ಬರಹ (ಏ. 30) ಇಷ್ಟವಾಯಿತು. ಒಂದು ಸಿನಿಮಾದ ಪ್ರತಿಯೊಂದು ದೃಶ್ಯಗಳನ್ನು ಸಂಯೋಜಿಸುವ ಮುನ್ನ ಎಷ್ಟೆಲ್ಲಾ ಆಲೋಚನೆಗಳು ಇರುತ್ತವೆ ಎಂಬುದು ತಿಳಿಯಿತು. ಸಿನಿಮಾವನ್ನು ಗಂಭೀರವಾಗಿ ಪರಿಗಣಿಸಿ ಚಿತ್ರ ನಿರ್ಮಿಸುವ ಕಾಸರವಳ್ಳಿಯವರ ಮೇಲೆ ನನ್ನ ಗೌರವ ಇನ್ನೂ ಹೆಚ್ಚಾಯಿತು. ‘ದ್ವೀಪ’ ಪದ ಎಷ್ಟೆಲ್ಲಾ ಅರ್ಥ ಸಾಧ್ಯತೆಯನ್ನು ಹೊಂದಿದೆ ಎಂದು ತಿಳಿದು ಬೆರಗಾದೆ.
–ಮಂಜುನಾಥ್ ಸಿ. ನೆಟ್ಕಲ್, ಬೆಂಗಳೂರು

*

ಭಾವನೆಗಳ ಸೇತುವೆ
‘ಭಾವಸೇತು’ ಹೆಸರಿಗೆ ತಕ್ಕ ಹಾಗೆ ಭಾವನೆಗಳಿಗೆ ಸೇತುವೆಯಾಗಿದೆ. ಏ. 30ರ ಸಂಚಿಕೆಯಲ್ಲಿನ ‘ಆಕೆಯ ಆ ಅಳು’ ಮತ್ತು ‘ಗಂಡನ ಊಟ ಕೊಟ್ಟ ತಾಯಿ’ ಎರಡೂ ಮನಸ್ಸಿಗೆ ಹಿಡಿಸಿದವು. ಅದರಲ್ಲೂ ‘ಆಕೆಯ ಆ ಅಳು’ ಅತ್ಯಂತ ನೋವನ್ನುಂಟುಮಾಡಿತು.
–ಶೋಭಾ ಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.