ಬೆಂಗಳೂರು: ಆದಿತ್ಯ ಬಿರ್ಲಾ ಸನ್ಲೈಫ್ ಇನ್ಶುರನ್ಸ್ (ಎಬಿಎಸ್ಎಲ್ಐ) ಈಗ ಗ್ಯಾರಂಟೀಡ್ ಮೈಲ್ಸ್ಟೋನ್ ಪ್ಲ್ಯಾನ್ ಆರಂಭಿಸಿದೆ.
‘ಜೀವವಿಮೆ ಮತ್ತು ಪರಿಪಕ್ವತೆಗೆ ಸಂಬಂಧಿಸಿದಂತೆ ಸಂಪೂರ್ಣ ಖಾತರಿ ಒದಗಿಸುತ್ತದೆ. ಹಣಕಾಸು ಅನಿಶ್ಚಿತತೆ, ಬಡ್ಡಿ ದರ ಇಳಿಕೆಯ ಸಂದರ್ಭಗಳಲ್ಲಿ ಈ ಯೋಜನೆಯು ಉಳಿತಾಯ ಖಾತರಿ ಮತ್ತು ವಿಮೆ ರಕ್ಷಣೆ ಒದಗಿಸುತ್ತದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ರಜ್ದಾನ್ ತಿಳಿಸಿದ್ದಾರೆ.
60 ವರ್ಷದವರೂ ಈ ಯೋಜನೆ ಆಯ್ಕೆ ಮಾಡಿಕೊಳ್ಳಬಹುದು. ಕನಿಷ್ಠ ಕಂತು ₹ 15 ಸಾವಿರ ಮತ್ತು ಕನಿಷ್ಠ ವಿಮೆ ಮೊತ್ತ ₹ 2.25 ಲಕ್ಷ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.