ADVERTISEMENT

ಆರ್ಥಿಕ ಪ್ರಗತಿ: ಚೀನಾ ಹಿಂದಿಕ್ಕಲಿರುವ ಭಾರತ

ಪಿಟಿಐ
Published 24 ಜುಲೈ 2017, 19:30 IST
Last Updated 24 ಜುಲೈ 2017, 19:30 IST

ನವದೆಹಲಿ: ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ)  ಚೀನಾದ ವೃದ್ಧಿ ದರಕ್ಕಿಂತ ಹೆಚ್ಚಿಗೆ ಇರಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರ ಶೇ 7.2ರಷ್ಟು ಇರಲಿದೆ. ಇದು 2018–19ರಲ್ಲಿ ಶೇ 7.7ಕ್ಕೆ ಏರಲಿದೆ ಎಂದು ಐಎಂಎಫ್‌ ಸಿದ್ಧಪಡಿಸಿರುವ ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಏಪ್ರಿಲ್‌ ತಿಂಗಳಲ್ಲಿ ನೀಡಿದ್ದ ವರದಿಯಲ್ಲಿ ಉಲ್ಲೇಖಿಸಿದ್ದ ಭಾರತದ ಆರ್ಥಿಕ ವೃದ್ಧಿ ದರವನ್ನೇ ಐಎಂಎಫ್‌ ಈಗಲೂ ಉಳಿಸಿಕೊಂಡಿದೆ.

ಚೀನಾದ ಜಿಡಿಪಿ ಅಂದಾಜನ್ನು ಮಾತ್ರ ಶೇ 6.4 ರಿಂದ ಶೇ 6.7ಕ್ಕೆ ಹೆಚ್ಚಿಸಿದೆ. ಚೀನಾದ ಈ ವೃದ್ಧಿ ದರಕ್ಕೆ  ಹೋಲಿಸಿದರೆ ಭಾರತದ ಆರ್ಥಿಕತೆ ವೃದ್ಧಿ ದರ ಹೆಚ್ಚಿಗೆ ಇರಲಿದೆ.  ಜಾಗತಿಕ ಆರ್ಥಿಕತೆ ವೃದ್ಧಿ ದರ ಶೇ3.5ರಷ್ಟು ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT