ADVERTISEMENT

ಇಂದಿನಿಂದ ‘ಹೋಮ್‌ ಹಬ್ಬ’

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಇಂದಿನಿಂದ ‘ಹೋಮ್‌ ಹಬ್ಬ’
ಇಂದಿನಿಂದ ‘ಹೋಮ್‌ ಹಬ್ಬ’   

ಬೆಂಗಳೂರು: ಗೃಹ ನಿರ್ಮಾಣ ಸಂಸ್ಥೆ ಪುರವಂಕರ, ಶುಕ್ರವಾರದಿಂದ (ನ. 24) ಮೂರು ದಿನಗಳವರೆಗೆ (ನ. 26) ತನ್ನೆಲ್ಲ ಗೃಹ ನಿರ್ಮಾಣ ಯೋಜನೆಗಳ ಪ್ರದರ್ಶನ ‘ಹೋಮ್ ಹಬ್ಬ’ವನ್ನು ನಗರದಲ್ಲಿ ಏರ್ಪಡಿಸಿದೆ.

ನಗರದ ದಕ್ಷಿಣ ಭಾಗದಲ್ಲಿ ನೆಲೆಸಿರುವವರು ತಮ್ಮ ಮನೆಗೆ ಹತ್ತಿರದಲ್ಲಿಯೇ ಆಕರ್ಷಕ ಗೃಹ ಯೋಜನೆಗಳ ಸಮಗ್ರ ಮಾಹಿತಿ ಪಡೆಯುವಂತಾಗಬೇಕು ಎನ್ನುವ ಕಾರಣಕ್ಕೆ ಜೆ.ಪಿ ನಗರದಲ್ಲಿ ಇರುವ ಸ್ಟಾರ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಈ ಗೃಹ ಪ್ರದರ್ಶನ ಏರ್ಪಡಿಸಲಾಗಿದೆ.

ಈ ‘ಹೋಮ್ ಹಬ್ಬ’ದಲ್ಲಿ ಪುರವಂಕರದ ಕೈಗೆಟುಕುವ ಮತ್ತು ವಿಲಾಸಿ ವಸತಿ ಯೋಜನೆಗಳ ಸಮಗ್ರ ಮಾಹಿತಿ ಇರಲಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿನ ಜೆ.ಪಿ ನಗರ, ಜಯನಗರ ಮತ್ತು ಬನಶಂಕರಿ ಭಾಗದಲ್ಲಿ ವೈವಿಧ್ಯಮಯ ಮನೆ, ಅಪಾರ್ಟ್‌ಮೆಂಟ್ಸ್‌ ಖರೀದಿಸಲು ಉದ್ದೇಶಿಸಿರುವವರಿಗೆ ಇದೊಂದು ಅಪೂರ್ವ ಅವಕಾಶ ಒದಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.