ADVERTISEMENT

ಇಂದು ಜಿಎಸ್‌ಟಿ ಮಂಡಳಿ ಸಭೆ

ಪಿಟಿಐ
Published 15 ಡಿಸೆಂಬರ್ 2017, 19:30 IST
Last Updated 15 ಡಿಸೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಿಎಸ್‌ಟಿ ಮಂಡಳಿ ಶನಿವಾರ ಸಭೆ ಸೇರಲಿದ್ದು, ಇ–ವೇ ಬಿಲ್ ಶೀಘ್ರವೇ ಜಾರಿಗೊಳಿಸುವ ಹಾಗೂ ತೆರಿಗೆ ತಪ್ಪಿಸುವುದನ್ನು ತಡೆಯಲು ಇರುವ ಮಾರ್ಗಗಳ ಕುರಿತು ಚರ್ಚೆ ನಡೆಸಲಿದೆ.

ಈ ಹಿಂದೆ ನಡೆದ ಸಭೆಯಲ್ಲಿ, ಜನವರಿ 1ರಿಂದ ಹಂತ ಹಂತವಾಗಿ ಇ–ವೇ ಬಿಲ್‌ ಜಾರಿಗೊಳಿಸುವ ಬಗ್ಗೆ ಮಂಡಳಿ ನಿರ್ಧಾರಕ್ಕೆ ಬಂದಿತ್ತು. ಏಪ್ರಿಲ್‌ 1 ರಿಂದ ದೇಶವ್ಯಾಪಿ ಜಾರಿಗೊಳಿಸಲು ತೀರ್ಮಾನಿಸಿತ್ತು.

ಆದರೆ ತೆರಿಗೆ ವರಮಾನ ಸಂಗ್ರಹದಲ್ಲಿ ಇಳಿಕೆ ಕಾಣುತ್ತಿರುವುದರಿಂದ ಇ–ವೇ ಬಿಲ್ ಜಾರಿಗೊಳಿಸುವ ಅವಧಿಯ ಬಗ್ಗೆ ಮತ್ತೊಮ್ಮೆ ಚರ್ಚೆ ನಡೆಸಲು ಮುಂದಾಗಿದೆ.

ADVERTISEMENT

ಜುಲೈನಿಂದ ಸೆಪ್ಟೆಂಬರ್‌ ತಿಂಗಳವರೆಗೆ ಸಂಗ್ರಹವಾಗಿರುವ ತೆರಿಗೆಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ತೆರಿಗೆ ಸಂಗ್ರಹ ಇಳಿಕೆ ಕಂಡಿದೆ.

ಸೆಪ್ಟೆಂಬರ್‌ನಲ್ಲಿ ₹ 95,131 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಅಕ್ಟೋಬರ್‌ನಲ್ಲಿ ತೆರಿಗೆ ಸಂಗ್ರಹವು₹ 83,346 ಕೋಟಿಗೆ ಅಂದರೆ
₹ 11,785 ಕೋಟಿ ಕಡಿಮೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.