ADVERTISEMENT

ಎಸ್‌ಬಿಐ ಲಾಭ ಎರಡು ಪಟ್ಟು ಹೆಚ್ಚಳ

ಪಿಟಿಐ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಅರುಂಧತಿ ಭಟ್ಟಾಚಾರ್ಯ
ಅರುಂಧತಿ ಭಟ್ಟಾಚಾರ್ಯ   

ನವದೆಹಲಿ: ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) 2016–17ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ₹2,815 ಕೋಟಿ ನಿವ್ವಳ ಲಾಭ ಗಳಿಸಿದೆ.

2015–16ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ₹1,264 ಕೋಟಿಗಳಷ್ಟಿತ್ತು. ಬ್ಯಾಂಕ್‌ನ ವರಮಾನ ₹53,527 ಕೋಟಿಗಳಿಂದ ₹57, 720 ಕೋಟಿಗೆ (ಶೇ 7.8) ಹೆಚ್ಚಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ತಿಳಿಸಿದ್ದಾರೆ.

ಸರಾಸರಿ ವಸೂಲಿಯಾಗದ ಸಾಲದ ಪ್ರಮಾಣ  ಶೇ 6.5 ರಿಂದ ಶೇ 6.9ಕ್ಕೆ ಏರಿಕೆ ಕಂಡಿದೆ. ಆದರೆ, ನಿವ್ವಳ ಎನ್‌ಪಿಎ ಶೇ 3.81 ರಿಂದ ಶೇ 3.71ಕ್ಕೆ ಅಲ್ಪ ಇಳಿಕೆ ಕಂಡಿದೆ.

ನಿವ್ವಳ ಲಾಭ ಕುಸಿತ
ಆರ್ಥಿಕ ವರ್ಷಕ್ಕೆ ಬ್ಯಾಂಕ್‌ನ ನಿವ್ವಳ ಲಾಭ ₹12,225 ಕೋಟಿಗಳಿಂದ ₹ 241 ಕೋಟಿಗಳಿಗೆ ಶೇ 98 ರಷ್ಟು ಕುಸಿತ ಕಂಡಿದೆ.ಒಟ್ಟು ವರಮಾನ ₹2.73 ಲಕ್ಷ ಕೋಟಿಗಳಿಂದ ₹2.99 ಲಕ್ಷ ಕೋಟಿಗಳಿಗೆ ಶೆ 9.2ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.