ADVERTISEMENT

ಐಪಿಒ: ₹20 ಸಾವಿರ ಕೋಟಿ ಸಂಗ್ರಹ ಗುರಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 20:41 IST
Last Updated 27 ಮಾರ್ಚ್ 2017, 20:41 IST

ನವದೆಹಲಿ:  ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹20 ಸಾವಿರ ಕೋಟಿಗಳಷ್ಟು ಬಂಡವಾಳ ಸಂಗ್ರಹಿಸಲು ಹಲವು ಕಂಪೆನಿಗಳು ಮುಂದಿನ ತಿಂಗಳು ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿವೆ.

ಹುಡ್ಕೊ,  ಎನ್‌ಎಸ್‌ಇ ಮುಂತಾದವು ಮುಂದಿನ ತಿಂಗಳು ಐಪಿಒ ಬಿಡುಗಡೆ ಮಾಡಲಿವೆ.  ಎಸ್‌.ಚಂದ್‌ ಆ್ಯಂಡ್‌ ಕಂಪೆನಿ, ಜೆನಿಸಿಸ್‌ ಕಲರ್ಸ್,  ಸೆಬಿ ಒಪ್ಪಿಗೆ ಪಡೆದಿವೆ.  ಜಿಟಿಪಿಎಲ್‌ ಹ್ಯಾಥ್‌ವೇ, ಎನ್‌ಎಸ್‌ಇ,  ಸೇರಿ 11 ಕಂಪೆನಿ  ‘ಸೆಬಿ’ಒಪ್ಪಿಗೆಗೆ  ಕಾಯುತ್ತಿವೆ. ಎಸ್‌ಬಿಐ ಲೈಫ್‌ ಇನ್ಸೂರನ್ಸ್‌ ಐಪಿಒ ಸಂಬಂಧಿಸಿದ ದಾಖಲೆಗಳನ್ನು ಶೀಘ್ರದಲ್ಲಿಯೇ ‘ಸೆಬಿ‘ಗೆ ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT