ADVERTISEMENT

ಕಾರ್ಪೊರೇಟ್‌ ತೆರಿಗೆ ಶೇ 25ಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2015, 7:02 IST
Last Updated 28 ಫೆಬ್ರುವರಿ 2015, 7:02 IST

ನವದೆಹಲಿ: ಬಜೆಟ್‌ನಲ್ಲಿ ಕಾರ್ಪೊರೇಟ್‌ ವಲಯಕ್ಕೆ ರತ್ನಗಂಬಳಿ ಹಾಸಿರುವ ಕೇಂದ್ರ ಸರ್ಕಾರ ಶೇ 30ರಷ್ಟಿದ್ದ ಕಾರ್ಪೊರೇಟ್‌ ತೆರಿಗೆಯನ್ನು ಮುಂದಿನ ನಾಲ್ಕು ವರ್ಷಗಳ ಅವಧಿಗೆ ಶೇ 25ಕ್ಕೆ ತಗ್ಗಿಸಿದೆ.

ಅಲ್ಲದೆ, ದೇಶೀಯ ಐ.ಟಿ ಕಂಪೆನಿಗಳು ಜಾಗತಿಕ ಮಾರುಕಟ್ಟೆ ಜತೆ ಸ್ಪರ್ಧಿಸಲು ರೂ 150 ಕೋಟಿ ಆರಂಭಿಕ ಹೂಡಿಕೆಯಲ್ಲಿ ವಿಶ್ವದರ್ಜೆಯ ಐ.ಟಿ ವಲಯ ಅಭಿವೃದ್ಧಿ ಪಡಿಸುವುದಾಗಿ ಹೇಳಿದೆ.

ತಂತ್ರಜ್ಞಾನ ಸೇವೆಗಳ ಮೇಲಿನ ಆದಾಯ ತೆರಿಗೆ ರಾಯಧನವನ್ನು ಶೇ 10ರಷ್ಟು ಕಡಿತ ಮಾಡಲಾಗಿದೆ.
ಕಾರ್ಪೋರೇಟ್‌ ತೆರಿಗೆ ಕಡಿತ ಮಾಡುತ್ತಿದ್ದಂತೆ ಇಳಿಕೆ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮತ್ತೆ
312 ಅಂಶಗಳಷ್ಟು ಭಾರಿ ಏರಿಕೆ ಕಂಡಿದೆ.

ಕಪ್ಪು ಹಣವನ್ನು ವಾಪಸ್‌ ತರಲು ಹೊಸ ಕಾನೂನು ಜಾರಿಗೊಳಿಸುವು­ದಾಗಿಯೂ ಹೇಳಿದ ಅವರು, ಷೇರುಪೇಟೆ ಮಾರುಕಟ್ಟೆಯಲ್ಲಿ ಜನಸಾಮಾನ್ಯರ ಹೂಡಿಕೆ ಉತ್ತೇಜಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ‘ಸೆಬಿ’ಗೆ ಸೂಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT