ADVERTISEMENT

ಗುತ್ತಿಗೆ–ಮಾರಾಟ ನೀತಿ ಜಾರಿಗೆ ‘ಕಾಸಿಯಾ’ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST

ಬೆಂಗಳೂರು: ‘ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ನಿವೇಶನಗಳ ಗುತ್ತಿಗೆ ಮತ್ತು ಮಾರಾಟ ನೀತಿ ಮರುಜಾರಿಗೊಳಿಸಬೇಕು’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಸಂಘದ ಅಧ್ಯಕ್ಷ ಎ.ಪದ್ಮನಾಭ,‘ಸಣ್ಣ ಕೈಗಾರಿಕೆಗಳಿಗೆ ನಿವೇಶನಗಳ ಕೊರತೆ ಇದೆ. ಕೈಗಾರಿಕಾ ಪ್ರದೇಶಗಳಲ್ಲಿ ಶೇ 25 ರಷ್ಟು ಜಾಗವನ್ನು ಸಣ್ಣ ಕೈಗಾರಿಕೆಗಳಿಗೆ ಮೀಸಲಿಡಬೇಕು. ಹಾಗೆಯೇ ಪ್ರತ್ಯೇಕ ನಿರ್ದೇಶಾಲಯ ಸ್ಥಾಪಿಸಿ, ಹೊಸ ಸಣ್ಣ ಕೈಗಾರಿಕಾ ನೀತಿ ರಚಿಸಬೇಕು’ ಎಂದು ಒತ್ತಾಯಿಸಿದರು.

‘ಕೈಗಾರಿಕಾ ನಿವೇಶನಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕಕ್ಕೆ ಜಲಮಂಡಳಿ ಚದರ ಅಡಿಗೆ ₹400 ಪ್ರೋರಾಟ ಶುಲ್ಕ (ನೀರಿನ ಸಂಪರ್ಕ ಕಲ್ಪಿಸಲು ಏಕಕಂತಿನಲ್ಲಿ ಪಾವತಿಸುವ ಶುಲ್ಕ)  ₹200ಕ್ಕೆ ಇಳಿಸಬೇಕು. ‘ಸಣ್ಣ ಕೈಗಾರಿಕೆ ಆರಂಭಿಸಲು ನಿರುದ್ಯೋಗಿಗಳಿಗೆ ಸಾಲ ನೀಡಬೇಕು. ಮಹಿಳಾ ಉದ್ಯಮಿಗಳಿಗೆ ಶೇ 4 ಬಡ್ಡಿದರದಲ್ಲಿ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.