ADVERTISEMENT

ಚಿನ್ನ ಮಾರಾಟ ಹೆಚ್ಚಳ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಮುಂಬೈ (ಪಿಟಿಐ): ಬಂಗಾರದ ಧಾರಣೆ ಭಾರಿ ಏರಿಕೆ- ಇಳಿಕೆ ಕಾಣದೇ ಸ್ಥಿರವಾಗಿಯೆ ಇರುವುದರಿಂದ ಈ ಬಾರಿ ಅಕ್ಷಯ ತೃತೀಯದಲ್ಲಿ ಶೇ 25ರಷ್ಟು ಅಧಿಕ  ಚಿನ್ನಾಭರಣ ಮಾರಾಟವಾಗುವ ಸಾಧ್ಯತೆ ಇದೆ ಎಂದು ವರ್ತಕರು ನಿರೀಕ್ಷಿಸುತ್ತಿದ್ದಾರೆ.

ಕೆಲವು ದಿನಗಳವರೆಗೆ ಚಿನ್ನದ ಧಾರಣೆ ಸ್ಥಿರವಾಗಿರಲಿದೆ. ಇದರಿಂದ ಚಿನ್ನಾಭರಣ ಮಾರಾಟ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಮನುಭಾಯಿ ಜ್ಯೂವೆಲರ್ಸ್‌ ನಿರ್ದೇಶಕ ಸಮೀರ್‌ ಸಾಗರ್ ಸುದ್ದಿಸಂಸ್ಥೆಗೆ ಭಾನುವಾರ ತಿಳಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸರ, ಬಳೆ ಮತ್ತು ಇತರ ಸಣ್ಣ ವಸ್ತುಗಳ ಮಾರಾಟದಲ್ಲಿ ಶೇ 20ರಿಂದ ಶೇ 25ರಷ್ಟು ಹೆಚ್ಚಿನ ವ್ಯಾಪಾರ ನಡೆಯಲಿದೆ ಎಂದು ಅವರು ಅಂದಾಜು ಮಾಡಿದ್ದಾರೆ. ಮದುವೆಗೆ ಬಳಸುವ ಚಿನ್ನಾಭರಣ ಮಾರಾಟವು ಸಹ ಕಳೆದ ವರ್ಷಕ್ಕಿಂತಲೂ ಈ ಬಾರಿ ಶೇ 20ರಿಂದ ಶೇ 25ರಷ್ಟು ಅಧಿಕವಾಗಿರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

10 ಗ್ರಾಂ ಚಿನ್ನ ₨27 ಸಾವಿರ ಬೆಲೆ ಆಸು–ಪಾಸಿನಲ್ಲೇ ವಹಿವಾಟು ನಡೆಸುತ್ತಿದೆ. ಈ ಬಾರಿಯ ಅಕ್ಷಯ ತೃತೀಯ ಹೆಚ್ಚು ಸಂಭ್ರಮ ತಂದು ಕೊಡಲಿದೆ ಎಂದು ಪಿ.ಎನ್‌. ಗಾಡ್ಗೀಳ್‌ ಜ್ಯೂವೆಲರ್ಸ್‌ ಅಧ್ಯಕ್ಷ ಸೌರವ್‌ ಗಾಡ್ಗೀಳ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.