ADVERTISEMENT

ಚೆಕ್‌ಬುಕ್‌ ಸೌಲಭ್ಯ ರದ್ದು ಇಲ್ಲ: ಸ್ಪಷ್ಟನೆ

ಪಿಟಿಐ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಚೆಕ್‌ಬುಕ್‌ ಸೌಲಭ್ಯ ರದ್ದು ಇಲ್ಲ: ಸ್ಪಷ್ಟನೆ
ಚೆಕ್‌ಬುಕ್‌ ಸೌಲಭ್ಯ ರದ್ದು ಇಲ್ಲ: ಸ್ಪಷ್ಟನೆ   

ನವದೆಹಲಿ: ನಗದುರಹಿತ (ಡಿಜಿಟಲ್‌) ವಹಿವಾಟು ಜನಪ್ರಿಯಗೊಳಿಸಲು ಬ್ಯಾಂಕ್‌ ಚೆಕ್‌ಬುಕ್‌ ಸೌಲಭ್ಯ ರದ್ದುಗೊಳಿಸುವ ಯಾವುದೇ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

ಡಿಜಿಟಲ್‌ ವಹಿವಾಟು ಉತ್ತೇಜಿಸಲು ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರವು ಚೆಕ್‌ ಬುಕ್‌ ಸೌಲಭ್ಯ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿರುವ ಕಾರಣಕ್ಕೆ ಸರ್ಕಾರ ಈ ವಿವರಣೆ ನೀಡಿದೆ. ಇಂತಹ ಪ್ರಸ್ತಾವ ಪರಿಶೀಲನೆಯಲ್ಲಿ ಇಲ್ಲವೇ ಇಲ್ಲ ಎಂದು ಸಚಿವಾಲಯವು ಟ್ವೀಟ್‌ ಮಾಡಿದೆ.

2016ರ ನವೆಂಬರ್‌ನಲ್ಲಿ ಗರಿಷ್ಠ ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿದ ನಂತರ ಕೇಂದ್ರ ಸರ್ಕಾರವು ನಗದುರಹಿತ ವಹಿವಾಟು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಗದು ಚಲಾವಣೆಯ ಮೇಲಿನ ಅವಲಂಬನೆ ಕಡಿಮೆ ಮಾಡುವುದೂ ಸರ್ಕಾರದ ಉದ್ದೇಶವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.