ಮುಂಬೈ: ‘ಮುಂದಿನ ಹಣಕಾಸು ವರ್ಷದಲ್ಲಿ (2017–18) ದೇಶಿ ಜಾಹೀರಾತು ಮಾರುಕಟ್ಟೆಯ ವಹಿವಾಟು ಶೇ 13.5ರಷ್ಟು ಏರಿಕೆ ದಾಖಲಿಸಲಿದೆ’ ಎಂದು ಮ್ಯಾಡಿಸನ್ ವರ್ಲ್ಡ್ನ ಅಧ್ಯಕ್ಷ ಸ್ಯಾಮ್ ಬಲ್ಸಾರಾ ಹೇಳಿದ್ದಾರೆ.
ಇಲ್ಲಿ ನಡೆದ ‘ಮ್ಯಾಡಿಸನ್ ಜಾಹೀರಾತು ವರದಿ–2017’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
‘ಆದರೆ, ಈ ವಹಿವಾಟು ಪ್ರಗತಿಯು ತಿಂಗಳಿನಿಂದ ತಿಂಗಳಿಗೆ ವ್ಯತ್ಯಾಸಗೊಳ್ಳಲಿದೆ’ ಎಂದು ಅವರು ಹೇಳಿದರು. ನೋಟು ರದ್ದತಿ ಕಾರಣಕ್ಕೆ 2016ರಲ್ಲಿ ದೇಶಿ ಜಾಹೀರಾತು ಮಾರುಕಟ್ಟೆಯ ವೃದ್ಧಿಯು ಶೇ 12.5ರಷ್ಟು ಕಡಿಮೆಯಾಗಿತ್ತು ಎಂದೂ ತಿಳಿಸಲಾಗಿದೆ.