ADVERTISEMENT

ಜಿಎಸ್‌ಟಿ: ಆರ್ಥಿಕತೆ, ಹಣದುಬ್ಬರದ ಮೇಲೆ ದುಷ್ಪರಿಣಾಮ

ಪಿಟಿಐ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST

ನವದೆಹಲಿ: ಹಣದುಬ್ಬರ ತಡೆ ಮತ್ತು ಆರ್ಥಿಕ ಪ್ರಗತಿಗೆ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿರೀಕ್ಷಿತ ಪರಿಣಾಮ ಬೀರುವುದಿಲ್ಲ  ಎಂದು ಜಪಾನ್‌ ಹಣಕಾಸು ಸೇವಾ ಸಂಸ್ಥೆ ನೋಮುರಾ ಅಭಿಪ್ರಾಯಪಟ್ಟಿದೆ.

ಹಣದುಬ್ಬರ ಮತ್ತು ಜಿಡಿಪಿ ಮೇಲೆ ಜಿಎಸ್‌ಟಿ ಕನಿಷ್ಠ ಮಟ್ಟದ ಪರಿಣಾಮ ಬೀರಲಿದೆ. ಜಿಎಸ್‌ಟಿ ಜಾರಿಯ ನಂತರ  ಹಣದುಬ್ಬರ ಹೆಚ್ಚಾಗಲಿದ್ದು, ಜಿಡಿಪಿ ಮೇಲೂ ಪರಿಣಾಮ ಬೀರಲಿದೆ. ಆದರೆ, ದೀರ್ಘಾವಧಿಯಲ್ಲಿ ಲಾಭದಾಯಕವಾಗಲಿದೆ ಎಂದು ನೋಮುರಾ ಅಧ್ಯಯನ ವರದಿ ಹೇಳಿದೆ.

ಏಕರೂಪದ ಸರಳ ತೆರಿಗೆ ವ್ಯವಸ್ಥೆಯಿಂದ ವೆಚ್ಚ ತಗ್ಗಿ, ಉತ್ಪಾದನೆ ಹೆಚ್ಚಾಗಲಿದೆ. ವ್ಯವಸ್ಥಿತ ಆರ್ಥಿಕತೆಯಿಂದ ದೇಶಕ್ಕೆ ಬರುವ ವರಮಾನ ಹೆಚ್ಚಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಪೂರ್ವ ನಿಗದಿಯಂತೆ ಏಪ್ರಿಲ್‌ 1ರಿಂದ ಜಿಎಸ್‌ಟಿ ಜಾರಿಯಾಗಬೇಕಿತ್ತು. ಆದರೆ, ಕೇಂದ್ರ ಸರ್ಕಾರ ಜಾರಿ ದಿನವನ್ನು ಈಗ ಜುಲೈ 1ಕ್ಕೆ ಮುಂದೂಡಿದೆ. ಜಿಎಸ್‌ಟಿ ಜಾರಿಗೆ ದರ ನಿಗದಿ, ಅಂತಿಮ ಕರಡಿಗೆ ಶಾಸನಾತ್ಮಕ ಒಪ್ಪಿಗೆ ಬಾಕಿ ಇವೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.