ADVERTISEMENT

ಜಿಎಸ್‌ಟಿ: ಎಂಆರ್‌ಪಿ ಕಾಲಮಿತಿ ವಿಸ್ತರಣೆ

ಪಿಟಿಐ
Published 17 ನವೆಂಬರ್ 2017, 19:33 IST
Last Updated 17 ನವೆಂಬರ್ 2017, 19:33 IST
ಜಿಎಸ್‌ಟಿ: ಎಂಆರ್‌ಪಿ ಕಾಲಮಿತಿ ವಿಸ್ತರಣೆ
ಜಿಎಸ್‌ಟಿ: ಎಂಆರ್‌ಪಿ ಕಾಲಮಿತಿ ವಿಸ್ತರಣೆ   

ನವದೆಹಲಿ: ಜಿಎಸ್‌ಟಿ ತೆರಿಗೆ ದರ ಕಡಿತದ ಹೊಸ ದರಗಳನ್ನು ಪ್ಯಾಕೇಜ್ಡ್‌ ಉತ್ಪನ್ನಗಳ ಮೇಲೆ ಪ್ರದರ್ಶಿಸಲು ಡಿಸೆಂಬರ್‌ ಅಂತ್ಯದವರೆಗೆ ಕಾಲಾವಧಿ ವಿಸ್ತರಿಸಲಾಗಿದೆ.

ಹಲವಾರು ಸರಕುಗಳ ಬೆಲೆಗಳು ತಗ್ಗಿರುವುದರಿಂದ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ವಿವರ ಅಂಟಿಸಲು ಕಾಲಾವಕಾಶ ವಿಸ್ತರಿಸಲಾಗಿದೆ ಎಂದು ಗ್ರಾಹಕರ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ತಿಳಿಸಿದ್ದಾರೆ.

ಹೆಚ್ಚುವರಿ ಬೆಲೆ ವಿವರವನ್ನು ಈ ಹಿಂದಿನ ಬೆಲೆ ಪಕ್ಕದಲ್ಲಿಯೇ ಅಂಟಿಸಬೇಕು. ಇದು ಜುಲೈ 1ರ ಮುಂಚೆ  ದಾಸ್ತಾನು ಮಾಡಲಾಗಿದ್ದ ಇದುವರೆಗೂ ಮಾರಾಟವಾಗದ ಸರಕಿಗೂ ಅನ್ವಯಿಸುತ್ತದೆ. ಜಿಎಸ್‌ಟಿ ಮಂಡಳಿಯ ನಿರ್ಧಾರದ ಅನ್ವಯ, ಒಟ್ಟು 211 ಸರಕುಗಳ ಬೆಲೆಗಳು ಅಗ್ಗವಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.